ಶಿವಮೊಗ್ಗ ,ಏ.22: ನಗರದ ಬಸವನಗುಡಿ ನಿವಾಸಿ ಮಿನಿಮೋಳ್. ಹೆಚ್ ಇವರು ಮಂಡಿಸಿದ “ಲಿಂಗತ್ವಮತ್ತು ಬುಡಕಟ್ಟು ಸಮುದಾಯ: ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ ಮಹಿಳೆಯರ ಸಮಗ್ರ ಅಧ್ಯಯನ” ಎಂಬ ಸಂಶೋಧನೆ ಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ ವಿಜಯಪುರ ಡಾಕ್ಟರ್ ಆಫ್ ಫಿಲಾಸಫಿ ( PhD) ಪದವಿ ನೀಡಿ ಗೌರವಿಸಿದೆ.
ಗಮನಿಸಿ:ಪೌರ ಕಾರ್ಮಿಕರಿಗೆ 5 ಲಕ್ಷ ವಿಮೆ, ಶಿವಮೊಗ್ಗದಲ್ಲೇ ಮೊದಲು ಜಾರಿ
ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರೊ. ಹೇಮಲತ ಹೆಚ್ ಎಂ ಅವರ ಮಾರ್ಗದರ್ಶನದಲ್ಲಿ ಮಿನಿಮೋಳ್. ಹೆಚ್ ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಏಪ್ರಿಲ್ 21 ರಂದು ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ PhD ಪ್ರದಾನ ಮಾಡಲಾಯಿತು.
