Homeಜಿಲ್ಲೆಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಪ್ರಸೂತಿ ತಜ್ಞ ವೈದ್ಯರಾದ ಗೀತಾ ರವಿ, ಅಮಿತ ಹೆಗ್ಡೆ ಲಭ್ಯ .ಮಾತೃವಾತ್ಸಲ್ಯ...

ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಪ್ರಸೂತಿ ತಜ್ಞ ವೈದ್ಯರಾದ ಗೀತಾ ರವಿ, ಅಮಿತ ಹೆಗ್ಡೆ ಲಭ್ಯ .ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್” ಜಾರಿ

Spread the love

 

ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಪ್ರಸೂತಿ ತಜ್ಞ ವೈದ್ಯರಾದ ಗೀತಾ ರವಿ, ಅಮಿತ ಹೆಗ್ಡೆ ಲಭ್ಯ 

ಶಿವಮೊಗ್ಗದ ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆಯವರು ಇನ್ನೂ ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದರೆ.

ಪ್ರಸೂತಿ ತಜ್ಞರಾಗಿ ಸುಮಾರು ಮೂವತ್ತೈದು ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ     ಡಾ. ಗೀತಾರವಿ ಮತ್ತು ಡಾ. ಅಮಿತಹೆಗ್ಡೆ ಅವರು 20 ವರ್ಷಗಳಿಂದ ನೋವು ರಹಿತ ಹೆರಿಗೆಯಲ್ಲಿ ವಿಶೇಷ ಪರಿಣಿತರಾಗಿದ್ದು , ಬಂಜೆತನ ನಿವಾರಣೆ ಹಾಗೂ ಲ್ಯಾಪ್ರೋಸ್ಕೋಪಿಕ್ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.ಈ ವೈದ್ಯರುಗಳು ಇದೀಗ ಪೂರ್ಣಾವಧಿಯಾಗಿ ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ ಎಂದು ಮಾತೃವಾತ್ಸಲ್ಯ ಆಸ್ಪತ್ರೆಯ ನಿರ್ದೇಶಕರಾದ ಡಾ. ಪೃಥ್ವಿ ಬಿ. ಸಿ.  ಅವರು ಸುದ್ದಿಗೋಷ್ಠಿಯಲ್ಲಿಂದು ವಿವರಿಸಿದರು.

ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಯಶಸ್ವಿನಿ ಯೋಜನೆ ಸೇರಿದಂತೆ ಹಲವು ಖಾಸಗಿ ವಿಮಾ ಸೌಲಭ್ಯಗಳು ಕೂಡ ಜಾರಿಯಲ್ಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಅತೀ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಸಹಜ ಹೆರಿಗೆ ಸೌಲಭ್ಯ ಲಭ್ಯವಿದೆ. ಡಾ.ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆ ಇವರುಗಳ ಪಾಲ್ಗೊಳ್ಳುವಿಕೆಯಿಂದಾಗಿ ರೋಗಿಗಳಿಗೆ ಭರವಸೆಯ ಚಿಕಿತ್ಸೆ ಸಲಹೆ ಸಿಗಲಿದೆ ಎಂದರು.

ವಿಶೇಷವಾಗಿ ರೋಗಿಗಳಿಗಾಗಿ ರಿಯಾಯಿತಿಯ “ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್” ಜಾರಿಗೊಳಿಸಲಾಗಿದ್ದು, ಆಸಕ್ತರು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದ ಅವರು ಈ ಕಾರ್ಡ್ ಮೂಲಕ ಒಳರೋಗಿ ಹಾಗೂ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ರಿಯಾಯಿತಿ ಪಡೆಯಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆರವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೂ ಡಾ. ನಾಗಮಣಿ ಎಂ. ಸಿ. ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments