Homeರಾಜ್ಯನಾಳೆಯಿಂದ ವೈಭವದ ಕೋಟೆ ಶ್ರೀಮಾರಿಕಾಂಬ ಜಾತ್ರೆ, ...

ನಾಳೆಯಿಂದ ವೈಭವದ ಕೋಟೆ ಶ್ರೀಮಾರಿಕಾಂಬ ಜಾತ್ರೆ, ಎಂ ಶ್ರೀಕಾಂತ್ ಫಲ ಪುಷ್ಪದ ಭಕ್ತಿ ಸಮರ್ಪಣೆ, ಜನರ ಮನ ಸೆಳೆಯುತ್ತಿರುವ ಅಲಂಕಾರ

Spread the love

ನಾಳೆಯಿಂದ(ಫೆ.24) ಇತಿಹಾಸ ಪ್ರಸಿದ್ದ ಕೋಟೆ ಶ್ರೀಮಾರಿಕಾಂಬ ದೇವಿ ಜಾತ್ರೆ -ಗದ್ದುಗೆಗೆ ಫಲ ಪುಷ್ಪದ ವೈಭವ
ಎಂ ಶ್ರೀಕಾಂತ್ ಭಕ್ತಿ ಸಮರ್ಪಣೆ

ಶಿವಮೊಗ್ಗ: ನಾಳೆಯಿಂದ(ಫೆ.24) ಇತಿಹಾಸ ಪ್ರಸಿದ್ದ ಕೋಟೆ ಶ್ರೀಮಾರಿಕಾಂಬ ದೇವಿ ಜಾತ್ರೆ ಆರಂಭಗೊಳ್ಳಲಿದ್ದು,  ಹಿರಿಯ ಕಾಂಗ್ರೇಸ್ ಮುಖಂಡರು, ಡಿಸಿಸಿ ಬ್ಯಾಂಕ್ ನಿರ್ದೇಶಕರು ಆದ ಎಂ .ಶ್ರೀಕಾಂತ್ ಅವರು ಕಳೆದ ಬಾರಿಯಂತೆ ಈ ಬಾರಿಯೂ ಜಾತ್ರೆಯಲ್ಲಿ ಮಾರಿಕಾಂಬ ಗದ್ದುಗೆಗೆ ಫಲಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿಸುತ್ತಿದ್ದಾರೆ.

ಲಕ್ಷಾಂತರ ರೂ.ಗಳಿಗೂ ಹೆಚ್ಚಿನ ವೆಚ್ಚದಲ್ಲಿ ಕಳೆದ ಮೂರು ದಿನಗಳಿಂದ ಬೆಂಗಳೂರಿನಿಂದ ಆಗಮಿಸಿರುವ ಖ್ಯಾತ ಅಲಂಕಾರ ಸಂಸ್ಥೆ ’ಶ್ರವಣಾ’ಶ್ ವೆಡ್ಡಿಂಗ್ ವರ್ಲ್ಡ್’ ಸಂಸ್ಥೆಯ ತಂಡ ಹಗಲು ರಾತ್ರಿ ಗದ್ದುಗೆ ಅಲಂಕಾರ ಕೆಲಸದಲ್ಲಿ ತೊಡಗಿದ್ದಾರೆ. ಆರರಿಂದ ಏಳು ಲೋಡು ಕಲ್ಲಂಗಡಿ, ಚೈನಾಹಣ್ಣು, ಕಬ್ಬು , ಮೂಸಂಬೆ ಸೇರಿದಂತೆ ಟನ್ ಗಟ್ಟಲೆ ಹೂವಿನಿಂದ ಅಲಂಕಾರ ಮಾಡಲಾಗುತ್ತಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಮಾರಿಕಾಂಬ ಜಾತ್ರೆಯ ವೈಭವಕ್ಕೆ ಇನ್ನಷ್ಟು ಅಭೂತಪೂರ್ವ ಮೆರಗು ತರಲಿದೆ.
ದೇವಿಗೆ ಈ ವಿಶೇಷ ಅಲಂಕಾರ ಮಾಡಿಸುವ ಮೂಲಕ ಪರೋಪಕಾರಿ, ಕೊಡುಗೈ ದಾನಿ, ಜನಪರ ನಾಯಕ ಎಂದೇ ಹೆಸರಾಗಿರುವ ಎಂ .ಶ್ರೀಕಾಂತ್ ಅವರು ಮಾರಿಕಾಂಬೆಗೆ ಭಕ್ತಿ ಸಮರ್ಪಣೆ ಮಾಡುತ್ತಾ ಬಂದಿದ್ದಾರೆ.

ಕಳೆದ ಬಾರಿಯ ಜಾತ್ರೆಯ ಸಂದರ್ಭದಂತೆ ಈ ಬಾರಿಯೂ ನಾಡಿನ ಅಸಂಖ್ಯಾತ ಭಕ್ತರ ಭಕ್ತಿಯ ಕೋಟೆ ಶ್ರೀಮಾರಿಕಾಂಬ ದೇವಿಗೆ ನನ್ನ ಭಕ್ತಿಯನ್ನು ಈ ವಿಶೇಷ ಅಲಂಕಾರ ಮಾಡಿಸುವ ಮೂಲಕ ಸಮರ್ಪಿಸುತ್ತಿದ್ದೇನೆ. ಇದು ನಮ್ಮೂರಿನ ಜಾತ್ರೆಯ ವೈಭವವನ್ನು ಸಾರುತ್ತಿರುವುದು ಸಂತೋಷದ ವಿಷಯ. ಮಾರಿಕಾಂಬಾ ದೇವಿ ಸದಾ ಜನರಿಗೆ ಸುಖ, ಶಾಂತಿ, ಸಮೃದ್ದಿಯನ್ನು ಕೊಡಲಿ ಎಂದು ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ.
– ಎಂ. ಶ್ರೀಕಾಂತ್ . ನಿರ್ದೇಶಕರು. ಡಿಸಿಸಿ ಬ್ಯಾಂಕ್ ಶಿವಮೊಗ್ಗ

ಜಾತ್ರೆ ಪ್ರಯುಕ್ತ ಜಾತ್ರೆ ನಡೆಯುವ ಗಾಂಧಿಬಜಾರ್. ಕೋಟೆ ರಸ್ತೆ, ಸುತ್ತಮುತ್ತ ವಾಹನ ಸಂಚಾರ ಮಾರ್ಗ ನಿಷೇಧ ಮತ್ತು ಮಾರ್ಗಬದಲಾವಣೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾಪೊಲೀಸ್ ಆಡಳಿತ ಆದೇಶ ಹೊರಡಿಸಿದ್ದು, ಸೈನ್ಸ್ ಮೈದಾನ, ಸೆಕ್ರೇಡ್ ಹಾರ್ಟ್ ಚರ್ಚ್, ಮಹಾನಗರ ಪಾಲಿಕೆ ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ಬೆಳಗ್ಗೆ ೫ ಗಂಟೆಗೆ ಗಾಂಧಿಬಜಾರಿನ ತವರು ಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮಾರಿಕಾಂಬೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದ್ದು, ಮಂಗಳವಾರ ರಾತ್ರಿ ಗಾಂಧಿಬಜಾರಿನಿಂದ ಮೆರವಣಿಗೆ ಮೂಲಕ ಕೋಟೆ ರಸ್ತೆಯ ಮಾರಿಗದ್ದುಗೆಗೆ ದೇವಿಯನ್ನು ಆಹ್ವಾನಿಸಿ ಪ್ರತಿಷ್ಠಾಪಿಸಲಾಗುವುದು, ಬುಧವಾರ ಬೆಳಗ್ಗೆ 5 ಗಂಟೆಗೆ ಯಿಂದ ಸಾರ್ವತ್ರಿಕ ದರ್ಶನಕ್ಕೆ ಅವಕಾಶ ಸಿಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments