Homeರಾಜ್ಯ2026 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ-ಡಿ.ಉಮಾಪತಿ ಭಾಜನ

2026 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ-ಡಿ.ಉಮಾಪತಿ ಭಾಜನ

Spread the love

ಶಿವಮೊಗ್ಗ, ಅ.30: ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಸರ್ಕಾರದಿಂದ ಕೊಡ ಮಾಡುವ “ರಾಜ್ಯೋತ್ಸವ ಪ್ರಶಸ್ತಿಗೆ” 2026 ನೇ ಸಾಲಿನಲ್ಲಿ ಮಾಜಿ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಹಾಗೂ ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಭಾಜನರಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಶುಕ್ರವಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಸಮಾಜಸೇವೆ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಹಾಗೂ ಮಾಧ್ಯಮ ಕ್ಷೇತ್ರದಿಂದ ಡಿ.ಉಮಾಪತಿ ಅವರು ಆಯ್ಕೆಯಾಗಿದ್ದಾರೆ.

2026 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 71 ಗಣ್ಯ ವ್ಯಕ್ತಿಗಳು ಆಯ್ಕೆಯಾಗಿದ್ದು, ಜಾನಪದ, ಸಂಗೀತ, ನೃತ್ಯ, ಚಲನಚಿತ್ರ/ಕಿರುತೆರೆ, ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಕೃಷಿ, ಪರಿಸರ, ವಿಜ್ಞಾನ/ತಂತ್ರಜ್ಞಾನ, ಮಾಧ್ಯಮ, ಮಾಧ್ಯಮ/ಛಾಯಾಚಿತ್ರ, ಸಂಕೀರ್ಣ, ಸಂಕೀರ್ಣ/ವಾಸ್ತುಶಾಸ್ತ್ರ, ಸಮಾಜಸೇವೆ, ಆಡಳಿತ, ಇಂಜಿನಿಯರಿಂಗ್, ಸಾಹಿತ್ಯ, ಶಿಕ್ಷಣ, ನ್ಯಾಯಾಂಗ, ಹೊರನಾಡು/ಹೊರದೇಶ, ಕ್ರೀಡೆ ಕ್ಷೇತ್ರಗಳು ಪ್ರಶಸ್ತಿಗೆ ಒಳಗೊಂಡಿದೆ.

ನ.1 ರಂದು ನಡೆಯುವ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಸ್ತಿಗೆ ಭಾಜನರಾದ್ದವರನ್ನು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments