ಶಿವಮೊಗ್ಗ, ಮಾ.25: ಯಾವುದೇ ದೇವಸ್ಥಾನ, ಶಾಲೆಗಳು, ಸಾರ್ವಜನಿಕ ಸ್ಥಳಗಳು ಎಲ್ಲರ ಪ್ರವೇಶಕ್ಕೆಮುಕ್ತವಾದ ಸ್ಥಳಗಳಾಗಿವೆ. ಆದರೆ ಇಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಕಟ್ಟಿ ಎಚ್ಚರಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿ ಮಾತನಾಡಿದರು.
ಯಾವುದೇ ದೇವಸ್ಥಾನ, ಶಾಲೆಗಳು, ಸಾರ್ವಜನಿಕ ಸ್ಥಳಗಳು ಎಲ್ಲರ ಪ್ರವೇಶಕ್ಕೆ ಮುಕ್ತವಾದ ಸ್ಥಳಗಳಾಗಿವೆ. ಆದರೆ ಇಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವಂತಿಲ್ಲ.
ಈ ಕುರಿತು ಸಮಿತಿ ಸದಸ್ಯರು ದೇವಸ್ಥಾನಗಳ ಬಳಿ ಮುಕ್ತ ಪ್ರವೇಶ ಎಂದು ನಾಮಫಲಕ ಹಾಕಬೇಕೆಂದು ಪ್ರಸ್ತಾಪಿಸಿದಾಗ ಜನರಲ್ಲಿ ಕಾಯಿದೆ ಬಗ್ಗೆ ಸಾಕಷ್ಟು ಅರಿವಿದೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜಾಗೃತಿಮೂಡಿಸುವ ಮೂಲಕ ಸೌಹಾರ್ಧತಾ ವಾತಾವರಣಾ ನಿರ್ಮಿಸಲಾಗುತ್ತದೆ ಎಂದರು
