ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.19
ನಾನು ಬದುಕಿನ ಮೇಲೆ ರಾಜಕಾರಣ ಮಾಡುವವನು. ಭಾವನೆಗಳ ಮೇಲೆ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪರಿಗೆ ಕುಟುಕಿದರು.
ಅವರು ಶನಿವಾರ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿಯೊಂದಿಗೆ ಆಯೋಜಿಸಿದ್ದ ಸಾರ್ವಜನಿಕರೊಂದಿಗಿನ ನೇರ ಸಂವಾದ ಸಭೆಯಲ್ಲಿ ವಂದೇ ಮಾತರಂ ಎರಡೇ ಚರಣಕ್ಕೇ ಆಕ್ಷೇಪ ವ್ಯಕ್ತಪಡಿಸಿದ್ದ ಶಾಸಕ ಚನ್ನಬಸಪ್ಪಗೆ ತಮ್ಮ ಭಾಷಣ ಮೂಲಕ ಕೌಂಟರ್ ಕೊಟ್ಟರು.
ಗಮನಿಸಿ: ಮಲೆನಾಡ ಸಮಸ್ಯೆ ಬಗೆಹರಿಸಲು ಬಂಗಾರಪ್ಪನವರ ಶಿಷ್ಯ ಬಂದಿದ್ದಾರೆ
ನಾನು ಬಂದಾಗ ನನ್ನ ಗೆಳೆಯ ಹಾಗೂ ಶಾಸಕರು ಚನ್ನಸಸಪ್ಪ ನನಗೆ ಒಳ್ಳೆಯ ಸ್ವಾಗತ ಕೋರಿದ್ದಲ್ಲದೇ ನನ್ನನ್ನೂ ಕೆಣಕುತ್ತಿದ್ದಾನೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ವಂದೇ ಮಾತರಂ ಪೂರ್ಣ ಹಾಡಬೇಕು ಎಂದಿದ್ದಾರೆ. ಆದರೆ ನಾವು ಸ್ವಾತಂತ್ರ ಪೂರ್ವ ಹಾಗೂ ನಂತರದಿಂದ ಎರಡೇ ಚರಣ ಹಾಡುತ್ತ ಬಂದಿದ್ದೇವೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.
ರಾಜಕಾರಣಕ್ಕೆ ಬೇರೆ ವೇದಿಕೆ ಇದೆ. ಅಲ್ಲಿ ಮಾಡೊಣ. ರಾಜಕಾರಣದಲ್ಲಿ ವಿರೋಧ ಹಾಗೂ ಟೇಕೆ ಮಾಡುವವರು ಇದ್ದರೆನೇ ಬೆಳವಣೆಗೆಯಾಗಲು ಸಾಧ್ಯ. ನಿಮ್ಮ ಸಿದ್ದಾಂತ ಬೇರೆ. ನಮ್ಮ ಪಕ್ಷ ಸಿದ್ದಾಂತ ಬೇರೆ. ಅದಕ್ಕೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಈಗಾಗಲೇ ಇಲ್ಲಿನ ಜನರೇ ಉತ್ತರ ಕೊಟ್ಟಿದ್ದಿರೆ ಎಂದರು.
