Homeಜಿಲ್ಲೆಕೃಷಿ ವಿಜ್ಞಾನ ಪದವಿಗಳನ್ನು ಆರಂಭಿಸಲು ಖಾಸಗಿ ಕಾಲೇಜುಗಳಿಂದ ಅರ್ಜಿ ಆಹ್ವಾನ

ಕೃಷಿ ವಿಜ್ಞಾನ ಪದವಿಗಳನ್ನು ಆರಂಭಿಸಲು ಖಾಸಗಿ ಕಾಲೇಜುಗಳಿಂದ ಅರ್ಜಿ ಆಹ್ವಾನ

Spread the love

ಶಿವಮೊಗ್ಗ, ಏ.17: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಯೋಜಿತ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳನ್ನುಪ್ರಾರಂಭಿಸಲು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಲೇಜು ಸಂಯೋಜನೆ ಬಯಸುವ ಕಾನೂನುಬದ್ದ ಶೈಕ್ಷಣಿಕ ಸಂಸ್ಥೆಗಳು ಹಾಗೂ ಕರ್ನಾಟಕದ ಸೊಸೈಟಿ ನೊಂದಣಿ ಕಾಯ್ದೆಯಡಿಯಲ್ಲಿ ನೊಂದಾಯಿಸಲಾದ ಮಂಡಳಿಗಳು/ ಹೊಸೈಟಿಗಳು /ಟ್ರಸ್ಟ್ ಗಳಿಂದ ಅರ್ಜಿ ಆಹ್ವಾನಿಸಿದೆ.

ಬಿ.ಎಸ್ಸಿ. (ಹಾನರ್ಸ್) ಕೃಷಿ (ಬಿಎಸ್‌ಸಿ (ಹಾನ್ಸ್) ಕೃಷಿ), ಬಿ.ಟೆಕ್ ಕೃಷಿ ಇಂಜಿನಿಯರಿಂಗ್ ಬಿ.ಟೆಕ್ (ಕೃಷಿಇಂಜಿನಿಯರಿಂಗ್) ಬಿ.ಟೆಕ್.ಕೃಷಿ ಬಯೋಟೆಕ್ನಾಲಜಿ ಬಿ.ಟೆಕ್ (ಕೃಷಿ ಬಯೋಟೆಕ್ನಾಲಜಿ), ಬಿ.ಟೆಕ್ ಫುಡ್ ಟೆಕ್ನಾಲಜಿ ಬಿ.ಎಸ್ಸಿ (ಹಾನರ್ಸ್) ಅರಣ್ಯ (ಬಿಎಸ್ಸಿ ಹಾನರ್ಸ್), ಅರಣ್ಯಶಾಸ್ತ್ರ ಬಿಎಸ್ಸಿ (ಹಾನರ್ಸ್) ಕಮ್ಯೂನಿಟಿ ವಿಜ್ಞಾನ (ಬಿಎಸ್ಸಿ (ಹಾನ್ಸ್)ಸಮುದಾಯ ವಿಜ್ಞಾನ), ಬಿಎಸ್ಸಿ (ಹಾನರ್ಸ್) ಫುಡ್ ನ್ಯೂಟ್ರೀಶನ್ ಮತ್ತು ಡೈಯಟಿಕ್ಸ್ (ಬಿಎಸ್ಸಿ.(ಹಾನ್ಸ್) ಫುಡ್ ನ್ಯೂಟ್ರೀಶನ್ ಮತ್ತು ಡೈಯಟಿಕ್ಸ್ ಬಿಎಸ್ಸಿ(ಹಾನರ್ಸ್) ತೋಟಗಾರಿಕೆ(ಬಿಎಸ್ಸಿ (ಹಾನ್ಸ್)ತೋಟಗಾರಿಕೆ ಮತ್ತು ಬಿಎಸ್ಸಿ (ಹಾನರ್ಸ್) ರೇಷ್ಮೆ (ಬಿಎಸ್ಸಿ (ಹಾನ್ಸ್) ರೇಷ್ಮೆಸಾಕಾಣಿಕೆ) ಕೃಷಿ ಪದವಿ ಪ್ರಾರಂಭಿಸಲು ಅರ್ಜಿ ಸಲ್ಲಿಸಬಹುದಾಗಿದೆ.

ಗಮನಿಸಿ:ದೃಢ ಮನಸ್ಸೇ ಉತ್ತಮವಾದ ಔಷಧಿ: ಡಾ. ಡಿ. ಅರವಿಂದ

ಆಸಕ್ತರು ಅರ್ಜಿ ಹಾಗೂ ಮಾಹಿತಿಯನ್ನು www.uahs.edu.in  ಜಾಲತಾಣದಿಂದ ಪಡೆದು, ಮೇ.06 ರೊಳಗೆ ಸೂಕ್ತ ದಾಖಲಾತಿಯೊಂದಿಗೆ ಸಲ್ಲಿಸುವುದು. ಅರ್ಜಿ ಸಲ್ಲಿಸಿದ ನಂತರ (KSNUAHS-MSACR 2025)  ಪ್ರಕಾರ ಅವುಗಳನ್ನು ಪರೀಶೀಲಿಸಿ ನಿಯಮದಂತೆ ಪ್ರಕ್ರಿಯೆ ನಡೆಸಲಾಗುವುದು. ಅರ್ಜಿ ಸಲ್ಲಿಸುವ ಮುನ್ನ ನಿಬಂಧನೆಗಳನ್ನು ಸಂಪೂರ್ಣ ಪರಾಮರ್ಶಿಸಿ ಅದರಂತೆ ಅರ್ಜಿ ಸಲ್ಲಿಸುವುದು. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸಾಲಿಗೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ವಿವರ ಹಾಗೂ ನಿಬಂಧನೆಗಳು ಮತ್ತು ಅರ್ಜಿಗಾಗಿ www.uahs.edu.in ಜಾಲತಾಣಕ್ಕೆ ಭೇಟಿ ನೀಡಬಹುದು ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments