ಶಿವಮೊಗ್ಗ, ಏ,17: ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ ಸೂಲಿಬೆಲೆ ಏ.18 ರಂದು “ನಾನೇ ಭಾರತ್“ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಗೆ ನಿರ್ಬಂಧ ಹೇರಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಎಸ್ ಪಿ ರವರಿಗೆ ಮನವಿ ಸಲ್ಲಿಸಿದ್ದಾರೆ.
ಗಮನಿಸಿ: ಮಹಿಳಾ ಮೀಸಲಾತಿ- ಕೇಂದ್ರಕ್ಕೆ ಸೋಲು
ಹಲವು ಜಿಲ್ಲೆಗಳಲ್ಲಿ ನಿರ್ಭಂಧಕ್ಕೆ ಒಳಗಾಗಿರುವ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ಹಲವು ಕೋಮು ಪ್ರಚೋದನಕಾರಿ ಭಾಷಣದ ಪ್ರಕರಣಗಳಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಚಕ್ರವರ್ತಿ ಸೂಲಿಬೆಲೆಗೆ ಭಾಷಣ ಮಾಡಲು ಬಿಡಬಾರದು ಎಂದು ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ SDPI ಪಕ್ಷದ ಜಿಲ್ಲಾಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್, ಮತ್ತು ಶಿವಮೊಗ್ಗ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ರವರು ಉಪಸ್ಥಿತರಿದ್ದರು.
