ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಮಯಾಣ್ಣ ಗೌಡ ಅವರು ಗುರುವಾರ “ನಮಸ್ತೆ” ಕಾರ್ಯಕ್ರಮದಡಿಯಲ್ಲಿ ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕ ಕಚೇರಿಯನ್ನು Emergency Response sanitation unit(ERSU) ನ್ನು ಉದ್ಘಾಟಿಸಿದರು. ಈ ವೇಳೆ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್. ಗೋವಿಂದ, ವಿವಿಧ ವಿಭಾಗದ ಅಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಒಳ ಚರಂಡಿ ವಿಭಾಗ ಸಿಬ್ಬಂದಿಗಳು ಹಾಜರಿದ್ದರು.
ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕ ಎಂದರೇನು?
ಈ ಘಟಕವು ಕಾರ್ಮಿಕರ ಸಾವು ನೋವುಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದ್ದು, ಹೆಚ್ಚಿನ ಅಪಾಯದ ಕೆಲಸವಾದ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವಿಕೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ವಿಶೇಷ ಹಾಗೂ ತರಬೇತಿ ಪಡೆದ ತಂಡ ಇದಾಗಿದೆ.
ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕವೂ ಜವಾಬ್ದಾರಿಯುತ ನೈರ್ಮಲ್ಯ ಪ್ರಾಧಿಕಾರ (RSA) ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಹಸ್ತಚಾಲಿತ ಸ್ಕ್ಯಾವೆಂಜಿಂಗ್ ಅನ್ನು ತಡೆಗಟ್ಟಲು ಮತ್ತು ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ಯಂತ್ರಗಳನ್ನು ಬಳಸಲಿದೆ.
ಗಮನಿಸಿ:ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ;
ಈ ಘಟಕವು ಹೆಚ್ಚಾಗಿ ಸುರಕ್ಷತೆಯ ಬಗ್ಗೆ ಹರಿಸಲಿದ್ದು, ಒಳಚರಂಡಿ/ಸೆಪ್ಟಿಕ್ ಟ್ಯಾಂಕ್ಗಳನ್ನು ಹಸ್ತಚಾಲಿತವಾಗಿ ಸ್ವಚ್ಛಗೊಳಿಸುವುದರಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುತ್ತದೆ.
ಒಳಚರಂಡಿ ನಿರ್ವಹಣೆ ಅಥವಾ ಅದರ ಕಾರ್ಯವನ್ನು ಮಾಡುವ ಸ್ಥಳಗಳು ಅಥವಾ ಅದರ ಸಂಪರ್ಕಗಳಲ್ಲಿ ಸಮಸ್ಯೆ ಉಂಟಾದಾಗ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್ಗಳ ಅಡಿಯಲ್ಲಿ ಇದನ್ನು ಅನುಮತಿಸಲಾಗುತ್ತದೆ. ಹಾಗೂ ಸುರಕ್ಷಿತ ನಿರ್ವಹಣೆಗಾಗಿ ವಿಶೇಷ ರಕ್ಷಣಾ ಸಾಧನಗಳನ್ನು (ಪಿಪಿಇ) ಅಳವಡಿಸಲಾಗಿದೆ.
ಈ ಘಟಕದ ಅನುಕೂಲವನ್ನು ಸಹಾಯವಾಣಿಯಿಂದಲೂ ಪಡೆಯಬಹುದಾಗಿದ್ದು, ಶಿವಮೊಗ್ಗ ನಗರದ ಸಹಾಯವಾಣಿಯ ದೂ.ಸಂ : 14420
ಬಹುಮುಖ್ಯವಾಗಿ ಈ ಘಟಕ ಕೈಯಿಂದ ಮಲ ಹೊರುವ ಕಾರ್ಮಿಕರಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ, 2013 ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
