Homeಮನರಂಜನೆಆಯೋಗ್ಯ-2 'ಮಿಲ್ಕಿ ಬ್ಯೂಟಿ' ಹಾಡಲ್ಲಿ ನಟಿ ಪ್ರಜ್ಞಾ

ಆಯೋಗ್ಯ-2 ‘ಮಿಲ್ಕಿ ಬ್ಯೂಟಿ’ ಹಾಡಲ್ಲಿ ನಟಿ ಪ್ರಜ್ಞಾ

Spread the love

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಮತ್ತೊಂದು ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಇತ್ತೀಚೆಗಷ್ಟೇ ಬಿಡುಗಡೆಯಾದ ಮುದ್ದು ಮುದ್ದು ಪುಟ್ಟಲಕ್ಷ್ಮೀ, ಅಣ್ಣಾ ಬಂದ್ರೆ ಜೋಶ್ ಬತ್ತದೆ ಹಾಗೂ ಹುಡ್ಗೀರ್ ಡೇಂಜರಸ್ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ‘ಮಿಲ್ಕಿ ಬ್ಯೂಟಿ’ ಎಂಬ ಹಾಡು ರಿಲೀಸಾಗಿದೆ.

ಅರ್ಜುನ್ ಜನ್ಯ ಸಂಗೀತದ ಈ ಹಾಡಿಗೆ ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಇಂದು ನಾಗರಾಜ್, ನಿಶಾನ್ ರೈ ಕಂಠ ನೀಡಿರುವ ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಮಾರು ವರ್ಷಗಳ ನಂತರ ನಟಿ ಪ್ರಜ್ಞಾ ಈ ಹಾಡಲ್ಲಿ ಅಭಿನಯಿಸುವ ಮೂಲಕ ವಾಪಸ್ಸಾಗಿದ್ದಾರೆ.

ಗಮನಿಸಿ: ಜಿಲ್ಲೆಗೆ ಮತ್ತೆ ಮಧು ಬಂಗಾರಪ್ಪ-ಅಳೆದು ತೂಗಿ ಸಂಪುಟ ವಿಸ್ತರಣೆ

ಮಹೇಶ್ ಕುಮಾರ್ ಅವರ ನಿರ್ದೇಶನದ ಈ ಚಿತ್ರ ಆಗಸ್ಟ್ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರವನ್ನು ಎಸ್.ವಿ.ಸಿ. ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ಅವರು ನಿರ್ಮಿಸಿದ್ದಾರೆ.

ಈ ವೇಳೆ ನಾಯಕ ನೀನಾಸಂ ಸತೀಶ್ ಮಾತನಾಡುತ್ತ ಮಹೇಶ್ ಕುಮಾರ್ ಸಾರಥ್ಯದ ಆಯೋಗ್ಯ-2 ಸಿನಿಮಾದ ಕಂಟೆಂಟ್ ಕೇವಲ ಒಂದು ಹಳ್ಳಿಯ ಕಥೆಯಾಗಿರದೇ ರಾಜ್ಯದ ಪ್ರತಿ ಹಳ್ಳಿಗು ತಲುಪುವಂತಹ ಸಬ್ಜೆಕ್ಟ್’ ಆಗಿದೆ ಎಂದರು.

ನಾಯಕಿ ರಚಿತಾರಾಮ್ ಮಾತನಾಡಿ, ನಾನು ‘ಆಯೋಗ್ಯ ಹಾಗೂ ಆಯೋಗ್ಯ 2 ಈ ಎರಡು ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟು ಕಥೆಯನ್ನು ಎಂಜಾಯ್ ಮಾಡುತ್ತ ಅಭಿನಯಿಸಿದ್ದೇನೆ. ಆಯೋಗ್ಯ 2 ಸಿನಿಮಾವನ್ನು ನಮ್ಮ ವಿಐಪಿಗಳೊಂದಿಗೆ (ಪ್ರೇಕ್ಷಕರು) ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಲು ಕಾಯುತ್ತಿದ್ದೇನೆ, ದಯವಿಟ್ಟು ಬಂದು ಸಿನಿಮಾ ನೋಡಿ. ಕನ್ನಡ ಸಿನಿಮಾಗಳಿಗೆ ‘ದಯವಿಟ್ಟು ನೋಡಿ’ ಎಂದು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ಈ ಸಿನಿಮಾ ನೋಡಿ ಎಲ್ಲರೂ ಮೆಚ್ಚಿಕೊಳ್ತೀರ ಎಂಬ ಭರವಸೆಯಿದೆ ಎಂದರು.

ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ತಾರಾಗಣದಲ್ಲಿದ್ದು, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ವಿಶ್ವಜಿತ್ ರಾವ್ ಅವರ ಕ್ಯಾಮೆರಾವರ್ಕ್, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments