Homeಜಿಲ್ಲೆರೈತರಿಗೆ 15 ದಿನಗಳ ಕಾಲ ನೀರು ಹರಿಸದಿದ್ದರೆ ಪಾದಯಾತ್ರೆ:ಕೆ.ಟಿ.ಗಂಗಾಧರ್

ರೈತರಿಗೆ 15 ದಿನಗಳ ಕಾಲ ನೀರು ಹರಿಸದಿದ್ದರೆ ಪಾದಯಾತ್ರೆ:ಕೆ.ಟಿ.ಗಂಗಾಧರ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ,15

ಮಳೆ ಬಾರದೆ ಅಡಿಕೆ ಬೆಳೆಗಾರರು ಸೇರಿದಂತೆ ರೈತರು ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಸಾಮೂಹಿಕ ನಾಯಕತ್ವ) ಮುಖ್ಯಸ್ಥ, ರೈತ ಚುಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ ಕೆ.ಟಿ.ಗಂಗಾಧರ್ ಹೇಳಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಮಳೆ ಇಲ್ಲವಾಗಿದೆ. ಬರುವ ಸೂಚನೆಗಳು ಇಲ್ಲ. ಭದ್ರ ಜಲಾಶಯದಲ್ಲಿ ನಿರೀಕ್ಷೆಯಷ್ಟು ನೀರು ಸಂಗ್ರಹವಾಗಿಲ್ಲ. ಇದು ಕಷ್ಟದ ಕಾಲವೆಂಬ ಹರಿವು ನಮಗಿದೆ. ಹಾಗಾಗಿಯೇ ರೈತರು ಭತ್ತದ ಬೆಳೆಯನ್ನು ಈ ಬಾರಿ ಬೆಳೆಯುತ್ತಿಲ್ಲ. ಆದರೆ ಅಡಿಕೆ, ತೆಂಗು, ಬಾಳೆ ಮುಂತಾದ ತೋಟದ ಬೆಳೆಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಯಲ್ಲಿ ಇಂದಿನಿಂದಲೆ 15 ದಿನಗಳ ಕಾಲ ಭದ್ರ ಎಡ ಮತ್ತು ಬಲ ದಂಡೆಗಳ ನಾಲೆಗಳಲ್ಲಿ ಅಡಿಕೆ ತೋಟಕ್ಕೂ ಕುಡಿಯುವ ನೀರಿಗೂ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಗಮನಿಸಿ: ಸದಸ್ಯರ ವಂತಿಕೆಯನ್ನು ಕ್ರೋಢೀಕರಿಸಿ ಗಣೇಶನಿಗೆ ಬೆಳ್ಳಿ ಕಿರೀಟ ಅರ್ಪಣೆ

ರಾಜ್ಯ ಸರ್ಕಾರ ಇದಕ್ಕಾಗಿ ಸಮಯ ತೆಗೆದುಕೊಳ್ಳಬೇಕಾಗಿಲ್ಲ. ಸರ್ಕಾರಕ್ಕೆ ನಾವು ಎರಡು ದಿನದ ಗಡುವು ಕೊಡುತ್ತೇವೆ. ಈ ಹಿನ್ನೆಯಲ್ಲಿ ಇಂದು ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ರಾಜ್ಯ ರೈತ ಸಂಘ, ಭದ್ರಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ವತಿಯಿಂದ ತಕ್ಷಣ ನೀರು ಬಿಡುವಂತೆ ಆಗ್ರಹಿಸಲು ಪ್ರತಿಭಟನೆಯ ಮೂಲಕ ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ. ನಮ್ಮ ಮನವಿಗೆ ಸ್ಪಂದಿಸಿದರೆ ಒಳ್ಳೆಯದು ಎಂದರು.

ಇಲ್ಲಿದದ್ದರೆ ಸೆ.17 ರಂದು ಬೆಳಿಗ್ಗೆ 11 ಗಂಟೆಗೆ ಕಾಡಾ ಕಚೇರಿಯಿಂದ ಭದ್ರಾವತಿ ಮಾರ್ಗವಾಗಿ ಮಿಲಿಟರಿ ಕ್ಯಾಂಪ್, ಜಂಕ್ಷನ್, ಶಂಕರಘಟ್ಟದ ಮೂಲಕ ಭದ್ರಾ ಜಲಾಶಯದವರೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾದಯಾತ್ರೆ ಮಾಡಲಿದ್ದಾರೆ. ನಾಲೆಗಳಲ್ಲಿ ನೀರು ಹಸಿರುವವರೆಗೂ ಹೋರಾಟವನ್ನ ಮುಂದುವರೆಸುತ್ತಾರೆ ಎಂದು ಎಚ್ಚರಿಸಿದರು.

ರೈತರ ತೋಟಗಳಿಗೆ ಕೊಳವೆ ಬಾವಿ ಕೊರೆಸಿ:

ಮಳೆ ಇಲ್ಲದೆ ಬರಗಾಲದಿಂದ ರೈತರು ತತ್ತರಗೊಂಡಿದ್ದಾರೆ. ಕೋಟ್ಯಾಂತರ ಮೌಲ್ಯದ ಅಡಿಕೆ ಬೆಳೆ ನಾಶವಾಗುವುದು ಖಂಡಿತವಾಗುತ್ತದೆ. ಇತ್ತ ಜಲಾಶಯಗಳಲ್ಲೂ ನೀರು ಇಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರ್ಯಾಯವಾಗಿ ಯೋಚಿಸಬೇಕಾಗಿದೆ. ಪ್ರತಿ ರೈತನ ತೋಟಗಳಿಗೂ ಒಂದು ಕೊಳವೆ ಬಾವಿ ಕೊರೆಸಬೇಕು. ಜೊತೆಗೆ ಮೋಟರ್ ನೀಡಬೇಕು. ವಿದ್ಯುತ್‌ಚ್ಛಕ್ತಿ ತೊಂದರೆ ಇರುವುದರಿಂದ ಸೋಲಾರ್ ವ್ಯವಸ್ಥೆ ಮಾಡಿಸಬೇಕು. ಈ ಎಲ್ಲದನ್ನೂ ಒಂದು ಪ್ಯಾಕೇಜ್ ರೂಪದಲ್ಲಿ ರೈತನಿಗೆ ನೀಡಬೇಕು ಎಂದರು.

ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ 10 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದೆ. ರೈತನ ನೆರವಿಗೆ ಬರಲು ಏಕೆ ಸಾಧ್ಯವಿಲ್ಲ. ಇದು ಇಚ್ಚಶಕ್ತಿಯ ಕೊರತೆ ಅಷ್ಟೇ ರೈತನ ಪರವಾಗಿ ಜಂಭ ಕೊಚ್ಚಿಕೊಳ್ಳುವ ಸರ್ಕಾರಗಳು ರೈತರ ನೆರವಿಗೆ ಬರದಿದ್ದರೆ ಹೇಗೆ?. ರಾಜಕಾರಣಿಗಳ ಸರ್ಕಾರಗಳ ರಾಜಕೀಯ ಇಚ್ಛಶಕ್ತಿ ಕೊರತೆಯಿಂದ ಇಡೀ ರೈತ ಸಮೂಹ ಬರಗಾಲವನ್ನು ಎದುರಿಸಲಾರದೆ ಸೋತಂತಾಗಿವೆ ಎಂದರು.

ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಯೋಜನೆ ನೆನೆಗುದ್ದಿಗೆ ಬಿದ್ದಿದೆ ಕೇಂದ್ರ ಸರ್ಕಾರ ಈ ಯೋಜನೆಗೆ 5.300 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಆದರೆ ಇದುವರೆಗೆ ಹಣ ಬಿಡುಗಡೆಯಾಗಲಿಲ್ಲ. ತುಂಗೆಯಿಂದ ಭದ್ರೆಗೆ ನೀರು ಹರಿಯಲಿಲ್ಲ. ಅದರ ಬದಲು ಮಳೆಗಾಲದಲ್ಲಿ ತುಂಗೆಯಿಂದ ನೇರವಾಗಿ ತುಂಗಾ ಭದ್ರಾ ಜಲಾಶಯ ತಲುಪಿ ಆಂಧ್ರದ ಮೂಲಕ ಸಮುದ್ರ ಸೇರುವಂತಾಗಿದೆ. ಇದನ್ನು ಬಳಸಿಕೊಂಡಿದ್ದರೆ ಭದ್ರಾ ಜಲಾಶಯಕ್ಕೆ ನೀರು ಸಾಗಿಸಿ ಅಲ್ಲಿಂದ ಚಿತ್ರದುರ್ಗ ಭಾಗಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದಾಗಿತ್ತು. ತಾತ್ಕಾಲಿಕವಾಗಿ ಭದ್ರಾ ಮೇಲ್ದಂಡೆ ಮೂಲಕ 3 ಟಿಎಂಸಿ ನೀರನ್ನು ಪ್ರಯೋಗಾತ್ಮಕವಾಗಿ ಬಿಡಲಾಗಿದೆ. ಆದರೆ ಇದು ಎಷ್ಟು ದಿನ ನಡೆದಿತ್ತು. ಎಲ್ಲರಿಗೂ ನೀರು ಮುಖ್ಯ ನಿಜ. ಎಲ್ಲ ರೈತರು ನಮ್ಮವರೇ ಸರ್ಕಾರಗಳು ಇಂತಹ ಯೋಜನೆಗಳನ್ನ ಯುದ್ದೋಪಾಯದಲ್ಲಿ ನೆರವೇರಿಸಬೇಕು. ಆದರೆ ಸರ್ಕಾರಗಳಿಗೆ ಈ ಇಚ್ಛಶಕ್ತಿ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಯಶವಂತ್ ರಾವ್ ಗೋರ್ಪಡೆ, ಮಂಜುನಾಥ್, ಕೆ.ಜಗದೀಶ್, ರಘುಪತಿ, ಪ್ರಕಾಶ್ ತಳ್ಳಿಕಟ್ಟೆ, ಫರೀದ್, ಶಶಿ ನಲ್ಲಿಸರ, ಸಣ್ಣ ರಂಗಪ್ಪ, ಜಗದೀಶ್ ನಾಯಕ ಇನ್ನಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments