Homeದೇಶಐದನೇ ಬಾರಿ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಬಿ. ಸಿ. ಪ್ರಸನ್ನಕುಮಾರ

ಐದನೇ ಬಾರಿ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಬಿ. ಸಿ. ಪ್ರಸನ್ನಕುಮಾರ

Spread the love

ಐದನೇ ಬಾರಿ ಜಾಗತಿಕ ವಿಜ್ಞಾನಗಳ ಪಟ್ಟಿಯಲ್ಲಿ ಪ್ರೊ. ಬಿ. ಸಿ. ಪ್ರಸನ್ನಕುಮಾರ

ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯ ಪ್ರಕಟಿಸಿದ 2025ನೇ ಸಾಲಿನ ವಿಶ್ವದ ಶೇ.2 ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ. ಸಿ. ಪ್ರಸನ್ನಕುಮಾರ ಇವರು 11379 ನೇ ರ‍್ಯಾಂಕ್ ಪಡೆದು ಸತತ ಐದನೇ ಬಾರಿ ಈ ಪಟ್ಟಿಯಲ್ಲಿ (2021-2025) ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ವೃತ್ತಿ ಜೀವನದ ಸಾಧನೆಯಲ್ಲಿ  108229 ಶ್ರೇಯಾಂಕವನ್ನು ಪಡೆದಿರುವುದು ಗಮನಾರ್ಹವಾಗಿದೆ.

ಸ್ಟ್ಯಾನ್‌ಫೋರ್ಡ್‌ ವಿವಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ವರದಿ, ಉಲ್ಲೇಖಗಳು ಹಾಗೂ ಲೇಖನಗಳನ್ನೊಳಗೊಂಡ ಎಚ್-ಇಂಡೆಕ್ಸ್, ಐ-ಟೆನ್‌ ಇಂಡೆಕ್ಸ್ ಸೇರಿದಂತೆ ನಾನಾ ಮಾನದಂಡ ಪರಿಗಣಿಸಿ ಈ ಪಟ್ಟಿ ಸಿದ್ದಪಡಿಸಲಾಗಿದ್ದು, ಈ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರ ಮತ್ತು 174 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.

ಪ್ರೊ. ಬಿ. ಸಿ. ಪ್ರಸನ್ನಕುಮಾರ ಅವರು ಒಟ್ಟಾರೆ ೨೩೬ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಇದರಲ್ಲಿ 100721 ಉಲ್ಲೇಖಗಳು ಒಳಗೊಂಡಿವೆ ಹಾಗೂ ಇವರ ಲೇಖನಗಳು 59 ಎಚ್-ಇಂಡೆಕ್ಸ್ ಒಳಗೊಂಡಿವೆ.

ಕಡೂರು ತಾಲ್ಲೂಕಿನ ಕುಡ್ಲೂರು ಗ್ರಾಮದ ಶ್ರೀ ಬಾಳಜ್ಜರ ಚಂದ್ರಪ್ಪ ಮತ್ತು ಶ್ರೀಮತಿ ಶಕುಂತಲಾರವರ ಪುತ್ರರಾದ ಪ್ರೊ. ಬಿ. ಸಿ. ಪ್ರಸನ್ನಕುಮಾರ ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿಸುತ್ತಿದ್ದು, “ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ” ವಿಷಯಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಐದು ಜನ ವಿದ್ಯಾರ್ಥಿಗಳು ತಮ್ಮ ಪಿ.ಹೆಚ್.ಡಿ. ಪ್ರಂಬಂಧಗಳನ್ನು ಮಂಡಿಸಿದ್ದಾರೆ ಹಾಗೂ ಪ್ರಸ್ತುತ ಒಂಭತ್ತು ಸಂಶೋಧನಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರುವ ಡಾ. ಪುನೀತ್ ಗೌಡ‌ ಆರ್. ಜೆ, ಡಾ. ನವೀನ್ ಕುಮಾರ್ ಆರ್., ಡಾ. ಮಧುಕೇಶ್ ಜೆ. ಕೆ. ಹಾಗೂ ಡಾ. ವರುಣ್ ಕುಮಾರ್. ಆರ್. ಎಸ್. ಇವರುಗಳೂ ಸಹ ತಮ್ಮ ಮಾರ್ಗದರ್ಶಕರೊಡನೆಯೇ ವಿಶ್ವದ ಶೇ.2 ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ. ಇವರ ಈ ಸಾಧನೆಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಡಿ. ಕುಂಬಾರರವರು, ದಾವಣಗೆರೆ ವಿವಿಯ ಕುಲಪತಿಗಳು ಸೇರಿದಂತೆ ವಿವಿಯ ಆಡಳಿತ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments