ಪತ್ರಕರ್ತ ಭರತ ರಾಜ ಸಿಂಗ್ ಅವರಿಗೆ ಪಿತೃವಿಯೋಗ
ಶಿವಮೊಗ್ಗ ನಗರದ ವಿನೋಬನಗರದ ನಿವಾಸಿಗಳಾದ ನಿವೃತ್ತ ಪ್ರಿನ್ಸಿಪಾಲರು 96 ವರ್ಷದ ಶ್ರೀ ಆರ್ ಪುಟ್ಟು ಸಿಂಗ್ ರವರು ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಘಂಟೆಗೆ ಶಿವಮೊಗ್ಗದ ರೋಟರಿ ಚೀತಾಗಾರದಲ್ಲಿ ನೆರವೇರಿಸಲು ಅವರ ಕುಟುಂಬ ವರ್ಗ ನಿಶ್ಚಯಿಸಿದೆ.
ಪುಟ್ಟು ಸಿಂಗ್ ಅವರು ಹಿರಿಯ ಪತ್ರಕರ್ತ ಆರ್ ಪಿ ಭರತ್ ರಾಜ್ ಸಿಂಗ್ ಸೇರಿದಂತೆ ಮೂವರು ಮಕ್ಕಳು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
ಪುಟ್ಟಸಿಂಗ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯು ತೀವ್ರ ಸಂತಾಪ ಸೂಚಿಸಿದೆ.
ಪುಟ್ಟು ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು
ಸಂಘದ ಅಧ್ಯಕ್ಷರಾದ ಕೆ ವಿ ಶಿವಕುಮಾರ್, ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ವಿ ಟಿ ಹಾಗೂ ಎಲ್ಲಾ ಪದಾಧಿಕಾರಿಗಳು ಪತ್ರಕರ್ತರ ಪರವಾಗಿ ಪ್ರಾರ್ಥಿಸಿದ್ದಾರೆ.
