ಶಿವಮೊಗ್ಗ,ಮಾ.25: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ ಪ್ರತಿಬಂಧಕಕಾಯಿದೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಮೂಲಕ ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ನೀಡುವಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗಕಳವಿಕಟ್ಟಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ 2025 ರಲ್ಲಿ 128 ಮತ್ತು 2026 ರ ಫೆಬ್ರವರಿಮಾಹೆಯವರೆಗೆ 45 ಸೇರಿ ಒಟ್ಟು 174 ಪ್ರಕರಣಗಳು ದಾಖಲಾಗಿವೆ. ದಾಖಲಾದ ಪ್ರಕರಣಗಳಲ್ಲಿ 71 ಕ್ಕೆಚಾರ್ಜ್ ಶೀಟ್ ಹಾಕಲಾಗಿದೆ. 1 ಪ್ರಕರಣ ಕೈಬಿಡಲಾಗಿದೆ. 15 ಕ್ಕೆ ಬಿ. ರಿಪೋರ್ಟ್ ಸಲ್ಲಿಕೆಯಾಗಿದ್ದು 3 ಕ್ಕೆಹೈಕೋರ್ಟ್ ತಡೆಯಾಜ್ಞೆಯಿದೆ. 32 ಪ್ರಕರಣಗಳನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಲಾಗಿದೆಎಂದರು.
ದೌರ್ಜನ್ಯ ಪ್ರಕರಣದಡಿ ನೊಂದ ಸಂತ್ರಸ್ಥರಿಗೆ ರೂ.3.45 ಕೋಟಿ ಪರಿಹಾರ ನೀಡಲಾಗಿದೆ. ಇದರಲ್ಲಿಎಫ್.ಐ.ಆರ್. ದಾಖಲಾದ ತಕ್ಷಣ ರೂ. 2.02 ಕೋಟಿ, ಚಾರ್ಜ್ ಶೀಟ್ ಹಂತದಲ್ಲಿ ರೂ.1.38 ಕೋಟಿಮತ್ತು ತೀರ್ಪು ನಂತರ ರೂ. 3.45 ಲಕ್ಷ ಪರಿಹಾರ ನೀಡಲಾಗಿದೆ. ಪರಿಹಾರ ಪಡೆದವರಲ್ಲಿ 536 ಪರಿಶಿಷ್ಟಜಾತಿ ಮತ್ತು 53 ಪರಿಶಿಷ್ಟ ಪಂಗಡದ ಸಂತ್ರಸ್ಥರಿದ್ದಾರೆ.
