ಶಿವಮೊಗ್ಗ, ಏ.16: ಜಿಲ್ಲಾ ಭೋವಿ ( ವಡ್ಡರ ) ವಿದ್ಯಾವರ್ಧಕ ಸಂಘದಿಂದ ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಿದ್ದು, ಅಸಕ್ತರು ಸಂಘದ ಕಚೇರಿಯಲ್ಲಿ ಅರ್ಜಿ ಪಡೆದು, ನಿಗದಿತ ಅವಧಿಯೊಳಗೆ ಅರ್ಜಿಸಲ್ಲಿಸಬಹುದು ಎಂದು ಸಂಘದ ಕಾರ್ಯದರ್ಶಿ ವೀರೇಶಪ್ಪ ಕೆ.ಎನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಕಾಲಿಡುತ್ತಿರುವ ಜಿಲ್ಲಾ ಭೋವಿ ( ವಡ್ಡರ ) ವಿದ್ಯಾವರ್ಧಕ ಸಂಘವು ಭವಿಷ್ಯದಲ್ಲಿ ಇನ್ನಷ್ಟು ಸದಸ್ಯ ರನ್ನು ಹೊಂದುವ ಮೂಲಕ ಸಮಾಜದ ಜನರ ಸಮಗ್ರ ಅಭಿವೃದ್ದಿಗೆ ಹೊಸ ಹೊಸ ಯೋಜನೆಗಳನ್ನು ಹೊಂದಿದೆ. ಅದರ ಭಾಗವಾಗಿಯೇ ಈಗ ಸಂಘದ ಅಧ್ಯಕ್ಷರಾದ ಎಸ್. ರವಿಕುಮಾರ್ ಅವರ ಸೂಚನೆಯಂತೆ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಗಮನಿಸಿ: ಏ.17 ರಿಂದ “ಹ್ಯಾಕಥಾನ್”
ಸದಸ್ಯ ಪಡೆಯಲು ಇಚ್ವಿಸುವ ಸಮಾಜದ ಜನರು ಜಿಲ್ಲಾ ಭೋವಿ ( ವಡ್ಡರ) ವಿದ್ಯಾವರ್ಧಕ ಸಂಘ, ಭೋವಿ ಭವನ , ಬಾಲರಾಜ್ ಅರಸು ರಸ್ತೆ, ಪಾರ್ಕ್ ಬಡಾವಣೆ ಶಿವಮೊಗ್ಗ, ಇಲ್ಲಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ವಾಪಾಸ್ ನಿಗದಿತ ಶುಲ್ಕದೊಂದಿಗೆ ಏಪ್ರಿಲ್ 31 ರೊಳಗಾಗಿ ಸಂಘದ ಕಚೇರಿಗೆ ತಲುಪಿಸಬಹುದು.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : 9113201271 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
