Homeರಾಜ್ಯಕಿಮ್ಮನೆ ರತ್ನಾಕರ್ ಅವರಿಗೆ ’ಎಸ್ ಎಂ ಕೃಷ್ಣ ದತ್ತಿ ಪ್ರಶಸ್ತಿ’

ಕಿಮ್ಮನೆ ರತ್ನಾಕರ್ ಅವರಿಗೆ ’ಎಸ್ ಎಂ ಕೃಷ್ಣ ದತ್ತಿ ಪ್ರಶಸ್ತಿ’

Spread the love

ಕಿಮ್ಮನೆ ರತ್ನಾಕರ್ ಅವರಿಗೆ ’ಎಸ್ ಎಂ ಕೃಷ್ಣ ದತ್ತಿ ಪ್ರಶಸ್ತಿ’

ಮಂಡ್ಯ ಕರ್ನಾಟಕ ಸಂಘದ ಶ್ರೀ ಎಸ್ ಎಂ ಕೃಷ್ಣ ದತ್ತಿ ನಿಧಿ ಪ್ರಶಸ್ತಿಗೆ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಆಯ್ಕೆಯಾಗಿದ್ದಾರೆ.
ರಾಜಕೀಯ/ಸಂಗೀತ/ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಓರ್ವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಮಂಡ್ಯ ಜಿಲ್ಲೆಯ ಸರ್ವಶ್ರೇಷ್ಠ ನಾಯಕರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಥಮ ವರ್ಷದ ಎಸ್ ಎಂ ಕೃಷ್ಣ ದತ್ತಿ ನಿಧಿ ಪ್ರಶಸ್ತಿ ಗೆ ರಾಜಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಸೇವೆಯಿಂದ ಸಾಧನೆಗೈದಿರುವ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಂಘ ಮಂಡ್ಯ ಅಧ್ಯಕ್ಷರಾದ ಪ್ರೊ.ಜಯಪ್ರಕಾಶ್ ಗೌಡ ತಿಳಿಸಿದ್ದಾರೆ.

ಪ್ರಶಸ್ತಿಯು 50 ಸಾವಿರ ರೂ , ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಮೇ. 5 ರಂದು ಸಂಜೆ 5 ಗಂಟೆಗೆ ಮಂಡ್ಯ ಕರ್ನಾಟಕ ಸಂಘದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments