Homeಜಿಲ್ಲೆಜಿಲ್ಲಾ ಸಚಿವರ ಮುತ್ತಿಗೆ: ಬಜರಂಗದಳದವರು ಪೊಲೀಸರ ವಶ

ಜಿಲ್ಲಾ ಸಚಿವರ ಮುತ್ತಿಗೆ: ಬಜರಂಗದಳದವರು ಪೊಲೀಸರ ವಶ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.22

ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕೆಡಿಪಿ ಸಭೆಯ ಹಿನ್ನೆಲೆ ಬಜರಂಗದಳ ಪ್ರತಿಭಟನೆ ನಡೆಸಿದ್ದು, ಸಚಿವರನ್ನೇ ಮುತ್ತಿಗೆ ಹಾಕಲು ಯತ್ನಿಸಿದ ಸಂಘಟಕರನ್ನು ಪೊಲೀಸ್ ವಶ ಪಡಿಸಿಕೊಂಡರು.

ಶುಕ್ರವಾರ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ನಡೆಯುತ್ತಿರುವ ಕೆಡಿಪಿ ಸಭೆ ಆಗಮಿಸುವ ಸಂದರ್ಭದಲ್ಲಿ ಏಕಾಏಕಿ ಪ್ರತಿಭಟನೆಗೆ ಬಜರಂಗದಳ ಮುಂದಾಯಿತು.

ಗಮನಿಸಿ: ತುರ್ತು ಪರಿಹಾರವನ್ನು ಘೋಷಿಸಿ: ರೈತರು ಆಗ್ರಹ

ಈ ವೇಳೆ ಬಜರಂಗದಳ ದವರು ಹಿಜಾಬ್ ನಿಷೇಧ ವಾಪಸ್ ಪಡೆದಿದಕ್ಕೆ ಆಕ್ರೋಶ ವ್ಯಕ್ತಡಿಸಿ, ಹಿಜಾಬ್ ಗೂ ಶಿವಧಾರ ಮತ್ತು ಜನಿವಾರಕ್ಕೂ ಸಚಿವರೆ ಸಂಬಂಧ ಕಲ್ಪಿಸಬೇಡಿ ಎಂದರು.

ಸನಾತನ ಧರ್ಮ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ಸಂಪ್ರದಾಯಗಳು ನಡೆದು ಬಂದಿದೆ. ಶಾಲೆಗಳಲ್ಲಿ ಸಮವಸ್ತ್ರ ಧರಿಸಬೇಕು ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ. ಹಿಂದೂ ಸಮಾಜದ ಮಹಿಳೆಯರು ಮಕ್ಕಳಿಗೆ ತಿಲಕವಿಟ್ಟು ರುದ್ರಾಕ್ಷೇಶ್ವರ ಮೊದಲಾದ ಪದ್ಧತಿಯನ್ನು ಮರೆಯಬೇಡಿ.

ಇದು ಮುಂದುವರೆದರೆ ಜೂನ್ ಒಂದರಿಂದ ಶಾಲರಂಭದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲೆಯನ್ನು ಪ್ರವೇಶಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments