Homeಜಿಲ್ಲೆಮಕ್ಕಳೆ ದೇವರು, ಗುರುವೇ ಅರ್ಚಕ: ಆರುಂಡಿ ಶ್ರೀನಿವಾಸ್

ಮಕ್ಕಳೆ ದೇವರು, ಗುರುವೇ ಅರ್ಚಕ: ಆರುಂಡಿ ಶ್ರೀನಿವಾಸ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.23

ವಿನೋಬನಗರದ ಕರಿಯಣ್ಣ ಬಿಲ್ಡಿಂಗ್ ಹತ್ತಿರವಿರುವ ಇಂದಿರಾ ಪ್ರಕಾಶ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಅಜ್ಜಿ ಮನೆ ಬೇಸಿಗೆ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮರೋಪ ಕಾರ್ಯಕ್ರಮದಲ್ಲಿ ಸಮರೋಪ ಭಾಷಣ ಮಾಡಿದ ಲೇಖಕ ಆರುಂಡಿ ಶ್ರೀನಿವಾಸ ಮೂರ್ತಿ, ಮಕ್ಕಳ ಮನಸ್ಸು ಹೂವಿನಂತೆ ಅದನ್ನು ನೋಯಿಸಬಾರದು. ಮಕ್ಕಳೆ ದೇವರು, ಗುರುವೇ ಅರ್ಚಕ. ಅವರನ್ನ ಪ್ರೀತಿಯಿಂದ ಬೆಳೆಸಿ ಎಂದರು.

ಅಜ್ಜಿ ಮನೆ ಎಂಬ ಪರಿಕಲ್ಪನೆ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಮೌಲ್ಯಗಳನ್ನು ತಿಳಿಸಿಕೊಟ್ಟ ಈ ಶಿಬಿರ ಯಶಸ್ವಿ ಯಾಗಿದೆ, ಇಂದಿರಾ ಪ್ರಕಾಶ್ ಅವರು ಅಭಿನಂದನೆಗೆ ಅರ್ಹರು ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ಮಾತನಾಡಿ, ಮಕ್ಕಳ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬೇಡಿ, ಭಯದ ಬೇಲಿ ಬೇಡ, ಆದರೆ ಶಿಸ್ತು ಇರಲಿ ಎಂದರು.

ಗಮನಿಸಿ: ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮುಖ್ಯಮಂತ್ರಿಗೆ ಪತ್ರ

ಇನ್ನರ್ ವೀಲನ ಮುಖ್ಯಸ್ಥೆ ಭಾರತಿ ಚಂದ್ರಶೇಖರ್ ಮಾತಾನಾಡಿ ಮಕ್ಕಳಿಂದ ಮೊಬೈಲ್ ನ್ನು ದೂರವಿಡಿ ಎಂದು ಸಲಹೆ ನೀಡಿದರು.

ಇಂದಿರಾ ಪ್ರಕಾಶ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷೆ ಇಂದಿರಾ ಪ್ರಕಾಶ್ ಶಿಬಿರದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಿಬಿರದ ಮಕ್ಕಳಿಂದ ವಿವಿಧ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಚೆನ್ನಗಿರಿಯ ಡ್ಯಾನ್ಸ್ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಬಿರದ ಸಂಚಾಲಕಿ ಹಾಗು ಕವಯತ್ರಿ ಅನಿತಾ ಸೂರ್ಯ ಕಾರ್ಯಕ್ರಮ ನೆಡಿಸಿ ಕೊಟ್ಟರು. ಶಿಬಿರದ ತರಬೇತುದಾರರಾದ ನೃತ್ಯ ಶಿಕ್ಷಕ ಪ್ರಮೋದ್, ಸಂಸ್ಕೃತ ಶಿಕ್ಷಕ, ಮಂಜುನಾಥ್ ನಾಯ್ಕ್, ಕ್ರಾಪ್ಟ್ ಶಿಕ್ಷಕಿ ನಳಿನಾ, ಮತ್ತು ಮಕ್ಕಳಾದ ಆಯುತ್, ಶ್ರೀಧರ, ಹಿತನ್ ಸಾಯಿ, ವಿಕಾಸ್, ಜೀ ಟಿವಿ ಇವೆಂಟ್ ಆರ್ಗನೈಸೇಜರ್ ಲಕ್ಷೀ ಆನಂದ್, ಸುಶೀಲ ಷಣ್ಮಗಂ, ನಿವೃತ್ತ ಶಿಕ್ಷಕಿ ಭಾಗ್ಯಲಕ್ಷೀ, ಕಾತ್ಯಾಯಿನಿ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments