ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.11
ಚಂದನವನ ಆರೋಗ್ಯ ಪಾರ್ಕ್ನ ಗೆಳೆಯರ ಬಳಗದ ವತಿಯಿಂದ ಗೋಪಾಲಗೌಡ ಬಡಾವಣೆಯಲ್ಲಿರುವ ಚಂದನ ಆರೋಗ್ಯ ಪಾರ್ಕಿನಲ್ಲಿ ಜೂನ್ 14 ರಂದು ಭಾನುವಾರ ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಎನ್ ಯು ಆಸ್ಪತ್ರೆ, ಆದರ್ಶ ಕಣ್ಣಿನ ಆಸ್ಪತ್ರೆ, ಇವರ ಸಹಕಾರದಲ್ಲಿ ಈ ಶಿಬಿರ ನಡೆಯಲಿದ್ದು ಈ ಶಿಬಿರವು ಜೂನ್ 14 ರ ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ. ಶಿಬಿರಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಬೆಳಗ್ಗೆ ಚಾಲನೆ ನೀಡುವರು. ಪಾರ್ಕ್ನ ಗೌರವ ಅದ್ಯಕ್ಷ ಕಲಗೋಡು ರತ್ನಾಕರ್,ಕಾಂಗ್ರೆಸ್ ಮುಖಂಡ ಜಿ.ಡಿ.ಮಂಜುನಾಥ್, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿರುವರು.
ಗಮನಿಸಿ: ಉಪಕುಲಪತಿ ಆಯ್ಕೆಯ ಅಧಿಸೂಚನೆಯನ್ನು ರದ್ದು ಪಡಿಸಿ: ಪ್ರಕಾಶ್ ಕಮ್ಮರಡಿ
ಎನ್ ಯೂ ಹಾಗು ಆದರ್ಶ ಕಣ್ಣಿನ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರುಗಳು ತಪಾಸಣೆ ನಡೆಸುವರು. ಶಿಬಿರದಲ್ಲಿ ಪ್ರಮುಖವಾಗಿ ವೈದ್ಯರ ಸಮಾಲೋಚನೆ, ಬಿಪಿ ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ, ಇಸಿಜಿ, ಕ್ರಿಯಟಿನೇಟ್ ಪರೀಕ್ಷೆ (ವೈದ್ಯರು ಹೇಳಿದರೆ ಮಾತ್ರ) ಕಣ್ಣಿನ ತಪಾಸಣೆ ಈ ಸೌಲಭ್ಯಗಳು ಈ ಶಿಬಿರದಲ್ಲಿ ದೊರೆಯಲಿವೆ.
ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ಜೊತೆಗೆ ಮತ್ತು ಆದಷ್ಟು ಬೇಗ ಆಗಮಿಸುವಂತೆ ಮನವಿ ಮಾಡಲಾಗಿದೆ. ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂಬ ಧ್ಯೇಯವಾಕ್ಯದೊಂದಿಗೆ ಈ ಶಿಬಿರ ಆಯೋಜಿಸಿದ್ದು ಗೋಪಾಲ ಬಡಾವಣೆಯ ಸುತ್ತ-ಮುತ್ತಲ ಇರುವ ಬಡಾವಣೆಗಳ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಮೊ : 9916291028, 9448124433, 9741641435, ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಗುರುರಾಜ್ ಎಲ್. ಕೋರಿದ್ದಾರೆ.
