ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ. 19:
ನಗರದ ವಿವಿಧ ಬಡಾವಣೆ 8342 ಅಕ್ರಮ ಮನೆಗಳ ನಿವಾಸಿಗಳಿಗೆ ಸರ್ಕಾರ ಕೂಡಲೇ ಸಕ್ರಮಗೊಳಿಸಿ ಹಕ್ಕು ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.
ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಮಂಜುನಾಥ್ ಬಡಾವಣೆ, ಆನಂದರಾವ್ ಬಡಾವಣೆ, ಮಿಳಘಟ್ಟಮ ಜೆ.ಪಿ.ನಗರ, ಬುದ್ದ ನಗರ, ಶರಾವತಿ ನಗರ, ಹೊಸಮನೆ, ಹನುಮಂತನಗರ, ಚಟ್ನಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳನ್ನು ಬಡವರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಈಗಾಗಲೇ ಈ ಬಡಾವಣೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ನೀರು, ವಿದ್ಯುತ್, ಒಳಚರಂಡಿ ಮುಂತಾದ ನಾಗರೀಕ ಸೌಲಭ್ಯಗಳನ್ನ ನೀಡಿದೆ. ಆದರೆ ಹಕ್ಕು ಪತ್ರಗಳನ್ನು ಮಾತ್ರ ನೀಡಿಲ್ಲ ಎಂದು ಆರೋಪಿಸಿದರು.
ಗಮನಿಸಿ: ಕಾಂಗ್ರೆಸ್ನಿಂದ ರಾಜ್ಯದಲ್ಲಿ ಹಗಲು ದರೋಡೆ: ಡಿ.ಎಸ್.ಅರುಣ್
ಹಕ್ಕು ಪತ್ರ ಇಲ್ಲದೆ ಇರುವುದರಿಂದ ಇವರು ಬ್ಯಾಂಕ್ ಸಾಲ ಪಡೆಯಲಾಗುವುದಿಲ್ಲ. ಹಳೆ ಮನೆಗಳನ್ನ ದುರಸ್ಥಿ ಮಾಡಿಕೊಳ್ಳಲು ಆಗುವುದಿಲ್ಲ ಆದರಿಂದ ಸರ್ಕಾರ ಕೂಡಲೆ ಕಂದಾಯ ನಿಗದಿ ಮಾಡಿ ಹಕ್ಕು ಪತ್ರ ನೀಡಿ ಇ-ಖಾತೆ ಮಾಡಿಕೊಳ್ಳ ಅನುಮತಿ ಕೊಡಬೇಕು ಎಂದು ಒತ್ತಾಯಿಸಿ ಅವರು ಸರ್ಕಾರಿ ಬಸ್ ಗಳಲ್ಲಿ ಹಿರಿಯ ನಾಗರೀಕರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಂ.ಸAಗಯ್ಯ, ಎಸ್.ಪಿ.ಶಿವಣ್ಣ, ಶಂಕರನಾಯ್ಕ, ಮಂಜಪ್ಪಗೌಡರು, ಆಲಿನ್ಖಾನ್, ಆದಿಶೇಷ, ಚಂದ್ರಪ್ಪ ಇದ್ದರು.
