Homeಜಿಲ್ಲೆಸಾರ್ವಜನಿಕರ ಕ್ಷೇತ್ರದಲ್ಲಿರುವವರಿಗೆ ಕೆಂಪೇಗೌಡರು ಮಾದರಿ: ಬಿ.ವೈ.ರಾಘವೇಂದ್ರ

ಸಾರ್ವಜನಿಕರ ಕ್ಷೇತ್ರದಲ್ಲಿರುವವರಿಗೆ ಕೆಂಪೇಗೌಡರು ಮಾದರಿ: ಬಿ.ವೈ.ರಾಘವೇಂದ್ರ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.27

ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿರುವವರಿಗೆ ನಾಡಪ್ರಭು ಕೆಂಪೇಗೌಡರೇ ಮಾದರಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಶ್ರೀನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಗಮನಿಸಿ: ನೆಲೆದ ಮೇಲೆ ಅದಮ್ಯವಾದ ಪ್ರೀತಿ ಇರುವವರಿಗೆ ಸಾವಿಲ್ಲ: ಶ್ರೀಪತಿ ಹಳಗುಂದ

ಇತಿಹಾಸದಲ್ಲಿ ತುಂಬಾ ರಾಜರ ಕಥೆ ಕೇಳಿದ್ದೇವೆ. ಆದರೆ ಕೆಂಪೇಗೌಡರದ್ದು ಕಥೆ ಅಭಿವೃದ್ದಿ ಮತ್ತು ಜನಪರವುಳ್ಳದಾಗಿದೆ. 2 ಚದರ ಕಿಲೋ.ಮೀ ಇದ್ದ ಬೆಂಗಳೂರನ್ನು 800 ಚದರ ಕಿಲೋ.ಮೀ ಮಾಡಲು ನೀಲಿನಕ್ಷೆ ತಯಾರಿಸಿದ್ದರು. ಅದರ ಫಲವಾಗಿ ನಾವೆಲ್ಲಾ ಬೃಹತ್ ಬೆಂಗಳೂರನ್ನು ಕಾಣುತ್ತಿದ್ದೇವೆ. ಕೇವಲ ಆಡಳಿತ ನಡೆಸದೆ ನಗರ ಅಭಿವೃದ್ದಿಯ ಕಡೆ ಇವರು ದೂರದೃಷ್ಟಿ ಹೊಂದಿತ್ತು. ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಬೇಕೆಂಬ ಕನಸನ್ನು ಆಗಲೇ ಕಂಡಿದ್ದರು ಎಂದರು.

ಕೆಂಪೇಗೌಡರು ಅಭಿವೃದ್ದಿಯ ಜೊತೆಗೆ ಜಲಮೂಲ ರಕ್ಷಣೆ ಹಾಗೂ ಪೇಟೆಗಳ ನಿರ್ಮಾಣ ಕಡೆಯು ಹೆಚ್ಚು ಒತ್ತು ನೀಡಿದ್ದರು. ಮುಂದುವರೆದಂತೆ ಮಹಿಳೆಯರ ಸ್ವಾತಂತ್ರಕ್ಕೆ ಮುನ್ನುಡಿ ಬರೆದರು ಎಂದು ತಿಳಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಾವು ಅಭಿವೃದ್ದಿ ಹೆಸರಿನಲ್ಲಿ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟುತ್ತಿದ್ದೇವೆ. ಆದರೆ ಕೆಂಪೇಗೌಡರು ಯಾವುದನ್ನು ಕೆಡವಲಿಲ್ಲ ಆದರೆ ಕೆರೆಗಳನ್ನು ಕಟ್ಟಿದರು. ಸಮಾಜಕ್ಕೆ ಏನು ಅವಶ್ಯಕತೆ ಇದೆಯೆಂದು ಯೋಚಿಸಿ ಕೆಲಸ ಮಾಡಿದರು. ಅವರು ಮಾಡಿರುವ ಒಳ್ಳೆ ಸಂಗತಿಯನ್ನು ನಾವು ಮುಂದುವರಿಸಿಕೊಂಡು ಹೋಗೊಣ ಎಂದರು.

ಜನಪ್ರತಿನಿಧಿಗಳು, ಸಾರ್ವಜನಿಕರು ಒಟ್ಟುಗೂಡಿಕೊಂಡು ಶಿವಮೊಗ್ಗದಲ್ಲಿರುವ ಕೆರೆಯನ್ನು ಅಭಿವೃದ್ದಿ ಮಾಡೊಣ. ನಗರವನ್ನು ಹಸೀರುಕರಣಗೊಳಿಸೋಣ. ಈ ಮೂಲಕ ಕೆಂಪೇಗೌಡರಿಗೆ ಕೊಡುವ ಗೌರವ ಸಲ್ಲಿಸಿದ್ದಂತಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯದನ್ನೇ ಬಿಟ್ಟು ಹೋಗೋಣ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments