Homeಜಿಲ್ಲೆಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರಕ್ಕೆ ತಾಕತ್ತಿಲ್ಲ: ಶಾಸಕ

ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರಕ್ಕೆ ತಾಕತ್ತಿಲ್ಲ: ಶಾಸಕ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಆ.26

ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಾಕತ್ತಿಲ್ಲ ಸರ್ಕಾರ ಕಲಾಪವನ್ನು ಹಾಳುಗೆಡವಿದ್ದಲ್ಲದೆ. ಎರಡು ದಿನ ಮುಂಚಿತವಾಗಿಯೇ ಮೊಟಕುಗೊಳಿತು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕುಟುಕಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ದಿ ಕಾರ್ಯ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಸದನದಲ್ಲಿ ವಿರೋಧ ಪಕ್ಷಗಳು ಕೇಳುವ ಪ್ರಶ್ನೆಗೆ ಉತ್ತರಿಸದೆ ಈ ಸರ್ಕಾರ ಕಾಲ ಹರಣ ಮಾಡಿದೆ. ವಿಧಾನ ಸಭಾ ಅಧಿವೇಶನ 15 ದಿನಗಳ ಕಾಲ ನಡೆಯಬೇಕಿತ್ತು. ಆದರೆ ಕಾಂಗ್ರೆಸ್‌ನವರ ಕಾಲಹರಣದಿಂದ ಈ ಬಾರಿ 7 ದಿನ ಮಾತ್ರ ನಡೆದಿದ್ದು, ಈ ವಿಚಿತ್ರ ಸನ್ನಿವೇಶಕ್ಕೆ ಅತೀವ ನೋವು ತಂದಿದೆ ಎಂದರು.

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯಾದಾಗ ಭ್ರಷ್ಟಾಚಾರ ಮುಕ್ತ ಮಾಡ್ತಿವಿ ಅಂದಿದ್ದರು. ಆದರೆ ಈಗ ಅವರೇ ಒಬ್ಬ ಭ್ರಷ್ಟ ಸಚಿವನ ಪರವಾಗಿ ನಿಂತು ಸಮರ್ಥಿಸಿಕೊಂಡಿದ್ದಾರೆ. ಹಾಗಾಗಿ ಭ್ರಷ್ಟಚಾರ ನಿರ್ಮೂನೆಯೆಂದರೆ ಕಳ್ಳನ ಕೈಗೆ ಬಿಗದ ಕೀ ಕೊಟ್ಟಂತಾಗಿದೆ ಎಂದು ಕಿಡಿಕಾರಿದರು.

ಭ್ರಷ್ಟಚಾರದಿಂದ ಸಾಮಾನ್ಯ ಜನರ ಹಣ ದುರುಪಯೋಗವಾಗಿದ್ದು, ಮಾರ್ಚ್ನಲ್ಲಿ ಈ ಹಣ 4 ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಈ ಬಗ್ಗೆ ಈಗಾಗಲೇ ತನಿಖೆಯು ಆಗಿದೆ. ಶಿವಮೊಗ್ಗದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ಆತನ ಕುಟುಂಬ ಬೀದಿಪಾಲಾಗಿದೆ. ಆದರೆ ಸರ್ಕಾರ ಈತನನ್ನು ಸಚಿವ ಸಂಪುಟದಿಂದ ವಜಾ ಮಾಡಿ ಮತ್ತೇ ಈಗ ಆತನಿಗೆ ಸಚಿವ ಪಟ್ಟ ನೀಡಿರುವುದು ವಿಪರ್ಯಯಾಸ ಎಂದ ಅವರು ಆತನೇ ಮುಂದುವರೆಯಲು ಕೇಂದ್ರಕ್ಕೆ ಹಣ ಹೋಗಿದೆ ಎಂದು ಪಕ್ಷದವರೆ ಮಾತನಾಡಿಕೊಳ್ಳುತ್ತಾರೆ ಎಂದರು.

ಬರ ಸೇರಿದಂತೆ ವಾಲ್ಮೀಕಿ ಹಗರಣ, ಕೆಪಿಎಸ್‌ಸಿ, ಬಿಡದಿ ರೈತರ ಬಗ್ಗೆ ಚರ್ಚೆ ಆಗಬೇಕಿತ್ತು ಆದರೆ ಇದ್ಯಾವುದು ಕಾಂಗ್ರೆಸ್‌ಗೆ ಬೇಡವಾಗಿದೆ. ಇನ್ನೇಕು ಬೇಕೆಂಬುದು ಗೊತ್ತಾಗುತ್ತಿಲ್ಲ. ಚರ್ಚೆಯೆ ಇಲ್ಲದೆ ಇವರಿಗೆ ಇಷ್ಟ ಬಂದಂತೆ ಬಿಲ್ ಪಾಸ್ ಮಾಡಿಕೊಂಡಿದ್ದಾರೆ ಎಂದು ದೂರಿದ ಅವರು ಇಡೀ ಸದನ ಕಲಾಪ ಹಾಳಾಗಲು ಕಾಂಗ್ರೆಸ್ ಸರ್ಕಾರ ಕಾರಣವೆಂದು ದೂರಿದರು.

ಕೇಳಿದ ಪ್ರಶ್ನೆಗಳು ಹಲವು, ಉತ್ತರ ಕೆಲವು:

ಶಾಸಕ ಚನ್ನಬಸಪ್ಪನವರು ಈ ಬಾರಿಯ ಸದನದಲ್ಲಿ ಹಲವು ಪ್ರಶ್ನೆಗಳನ್ನ ಕೇಳಿದ ಬಗ್ಗೆ ಹೇಳಿದ ಅವರು, ನಾನು ಹಲವು ಪ್ರಶ್ನೆಗಳನ್ನು ಕೇಳಿದೆ ಸರ್ಕಾರದಿಂದ ಉತ್ತರವೇ ಸಿಗಲಿಲ್ಲ. ಕೆಲವ ಗಮನ ಸೆಳೆಯುವ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿದ್ದು, ಸ್ವಲ್ಪ ಸಮಾಧಾನ ತಂದಿದೆ ಎಂದರು.

ಶಿವಮೊಗ್ಗ ನಗರಕ್ಕೆ 2 ನೇ ಹಂತದ ಕುಡಿಯುವ ನೀರಿನ ಯೋಜನೆ, ತುಂಗಾ ಅಣೆಕಟ್ಟಿನ ಹೂಳನ್ನು ಎತ್ತುವುದು, ಸಾಮಾಜಿಕ ಭದ್ರತೆಯಡಿ ನೀಡುವ ಪಿಂಚಿಣಿ ನಿಲ್ಲಿಸಿರುವ ಬಗ್ಗೆ, ರೈತರ ಪೋಡಿ, ಹದ್ದುಭಸ್ತು, ಸರ್ವೇಯ ಬಗ್ಗೆ ಇಂಗ್ಲೀಷ್ ಮಾಧ್ಯಮದಿಂದ ಕನ್ನಡ ಮಾಧ್ಯಮದ ಪ್ರವೇಶದ ಬಗ್ಗೆ, ಪಠ್ಯಪುಸ್ತಕ, ಶೂ ವಿತರಣೆಯ ಬಗ್ಗೆ, ಪಾಲಿಕೆ ವ್ಯಾಪ್ತಿಯ ಜಾಗಗಳ ಗುರುತಿಸುವ ಬಗ್ಗೆ, ಇಎಸ್‌ಐ ಬಗೆ, ಅಂಗನವಾಡಿ ರ್ಕಾಯರ್ತರ ಸಮಸ್ಯೆ ಕುರಿತು, ಮುಜುರಾಯಿ ದೇವಸ್ಥಾನ ಗಣ ಬಿಡುಗಡೆ ಕುರಿತು ಅಲ್ಲಿನ ದೇವಸ್ಥಾನಗಳ ವಿದ್ಯುತ್ ಬಿಲ್ ಸಮಸ್ಯೆ ಕುರಿತು, ಸಾರಿಗೆ ಇಲಾಖೆಯಲ್ಲಿ ಸಮಸ್ಯೆಗಳ ಬಗ್ಗೆ, ಅಲೆಮಾರಿಗಳ ಮೂಲಭೂತ ಸಮಸ್ಯೆಗಳನ್ನು ಬಗ್ಗೆ, ಕೊಳಗೇರಿಗಳಿಗೆ ಅನುದಾನ, ಕುವೆಂಪು ವಿವಿಯಲ್ಲಿ ಭ್ರಷ್ಟಾಚಾರ, ಸ್ನಾತಕೋತ್ತರ ಕೋರ್ಸ್ ನಿಲ್ಲಿಸಿರುವುದರ ಬಗ್ಗೆ ಹೀಗೆ ಹತ್ತಾರು ಪ್ರಶ್ನೆಗಳನ್ನು ನಾನು ಕೇಳಿದೆ. ಆದರೆ ಉತ್ತರ ಮಾತ್ರ ಶೂನ್ಯವಾಗಿತ್ತು ಎಂದರು.

ಕುಡಿಯುವ ನೀರಿನ ಯೋಜನೆ ತಾತ್ವಿಕ ಒಪ್ಪಿಗೆ:

ಇಷ್ಟರ ನಡುವೆಯು ಒಂದೆರೆಡು ಸಮಾಧಾನ ಉತ್ತರಗಳು ಕೂಡ ನನಗೆ ಸಿಕ್ಕಿದೆ. ಇದು ಸ್ವಾಗತ ಕೂಡ. 2 ನೇ ಹಂತದ ಕುಡಿಯುವ ನೀರಿಗೆ ಯೋಜನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸಕ್ರಬೈಲು ಬಳಿ 24 ಎಕರೆ ಜಾಗ ಗುರುತು ಮಾಡಿ ಕೊಟ್ಟಿದ್ದೇವೆ. ಇದಕ್ಕಾಗಿ ಹಣದ ಭರವಸೆ ಕೂಡ ಕೊಟ್ಟಿದ್ದಾರೆ. ಕೆಯುಡ್ಲ್ಯೂಎಸ್  ಮಂಡಳಿಯಿಂದ ಅನುಮತಿಯೂ ಸಿಕ್ಕಿದೆ. ಇದೊಂದು ಸಂತೋಷ ಸಂಗತಿಯಾಗಿದೆ ಎಂದರು.

ಚಿತ್ರದುರ್ಗದಲ್ಲಿ ನಡೆದ ವಿಭಾಗೀಯ ಬರ ನಿರ್ವಹಣೆ ಕುರಿತ ಸಭೆಯಲ್ಲಿ ನಾನು ಬರ ಬಂದಾಗ ಈ ಹಿಂದೆ ಗಾಜನೂರು ಡ್ಯಾಂ ನಲ್ಲಿ ಹೂಳಿರುವ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅದಕ್ಕೂ ಕೂಡ ಈಗ ಕಾಲ ಕೂಡಿಬಂದಿದೆ. ಹೂಳೆತ್ತಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಇದಕ್ಕಾಗಿ ವಿವಿಧ ಇಲಾಖೆಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಈ ಸಮಿತಿಯು ಅತ್ಯಧುನಿಕ ರೀತಿಯಲ್ಲಿ ಹೂಳೆತ್ತುವ ಬಗ್ಗೆ ವರದಿ ಸಲ್ಲಿಸಲಿದೆ. ಆದಷ್ಟು ಬೇಗ ತುಂಗಾ ಡ್ಯಾಂನಲ್ಲಿ ಹೂಳೆತ್ತು ಕಾರ್ಯ ನಡೆಯಲಿದೆ. ಇದರಿಂದ ಕುಡಿಯುವ ನೀರಿನ ಯೋಜನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.

ಬಿಜೆಪಿ ಹೋರಾಟ ಫಲವಾಗಿ ಪಿಂಚಣೆ ಆದಾಯವನ್ನು ಸರ್ಕಾರ 32000 ದಿಂದ 1,20,000 ಏರಿಸಿದೆ. ಆದರೆ ರಾಜ್ಯದಲ್ಲಿ 23.14 ಲಕ್ಷ ಪಿಂಚಣಿ ರದ್ದಾಗಿದ್ದು, ಇದರಿಂದ ಪಿಂಚಣಿದಾರರು ಅನೇಕ ಸಮಸ್ಯೆ ಎದುರಿಸುವಂತಾಗಿತ್ತು. ಸದನಸಲ್ಲಿ ಈ ಕುರಿತು ನಾನು ಮತ್ತು ಆಶ್ವಥನಾರಾಯಣ್ ಧ್ವನಿ ಎತ್ತಿಸಿದ್ದೇವೆ ಇದರ ಪರಿಣಾಮವಾಗಿ ಸರ್ಕಾರ 6 ತಿಂಗಳ ಪಿಂಚಣಿಯಲ್ಲಿ 1 ತಿಂಗಳ ಪಿಂಚಣಿ ಬಿಡುಗಡೆ ಮಾಡಿದೆ. ಇನ್ನು 5 ತಿಂಗಳ ಪಿಂಚಣಿ ಬಾಕಿ ಇದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದ ಅವರು ಹಾಗೆಯೇ ಇಎಸ್‌ಐ ಸಂಬಂಧಿಸಿದಂತೆ ಆಸ್ಪತ್ರೆಗಳಲ್ಲಿ ರೆವರೆನ್ಸ್ ನಿಲ್ಲಿಸಿದ್ದರು. ಈಗ ಅದನ್ನು ಪುನಃ ಪ್ರಾರಂಭಿಸಿರುವುದು ಕೂಡ ಸ್ವಾಗತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಮಂಜುನಾಥ್ ನವಿಲೆ, ದಿನದಯಾಳ್, ಪ್ರಕಾಶ್, ಪ್ರಭಾಕರ್, ಯಶೋಧ, ಲತಾ ಶ್ರೀನಿವಾಸ್, ಮುರಳಿ, ಶ್ರೀನಾಥ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments