“ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ” ಎಂಬ ಹೇಳಿಕೆ ನೀಡಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈಗ ವಿಪಕ್ಷಗಳ ಟೀಕೆಗೆ ಒಳಾಗಿದ್ದಾರೆ.
ನ್ಯಾಯಾವಾದಿ ಹಾಗೂ ಸಂಸದ ಕಪಿಲ್ ಸಿಬಲ್ “ ಅಮೇರಿಕಾದಲ್ಲಿ ಏಕತೆಯ ಮಾತು, ಭಾರತದಲ್ಲಿ ಮೌನ” ಎಂದು ಟೀಕಿಸಿದರೆ ಇತ್ತ, ರಾಜ್ಯ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೋಮವಾರ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಮೋಹನ್ ಭಾಗವತ್ ಹಾಗೂ ಆರ್ಎಸ್ಎಸ್ ಅನ್ನು ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.
“ಎರಡು ಮುಖಗಳು, ಒಂದೇ ಸಂದೇಶವೇ?
ನ್ಯೂಯಾರ್ಕ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ವೈವಿಧ್ಯತೆಯನ್ನು “ನಮ್ಮ ಅಂತರAಗದ ಏಕತೆಯ ಅಲಂಕಾರ” ಎಂದು ಬಣ್ಣಿಸಿ, ಅದನ್ನು ರಕ್ಷಿಸಬೇಕು ಎಂದು ಬಹಳ ಸುಂದರವಾಗಿ ಮಾತನಾಡಿದ್ದಾರೆ.
ಆದರೆ ಭಾರತಕ್ಕೆ ಬೇಕಾಗಿರುವುದು ಕೇವಲ ವಿದೇಶದ ವೇದಿಕೆಯಲ್ಲಿ ಕೇಳಿಬರುವ ಮಾತುಗಳಲ್ಲ; ಆ ಮಾತುಗಳು ದೇಶದಲ್ಲಿಯೂ ಕಾರ್ಯರೂಪದಲ್ಲಿ ಪ್ರತಿಫಲಿಸಬೇಕು.

ದಶಕಗಳಿಂದ ಆರ್ಎಸ್ಎಸ್ ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ಸಂಘ ಪರಿವಾರದ ವಿವಿಧ ಸಂಘಟನೆಗಳು ಕೋಮು ಧ್ರುವೀಕರಣಕ್ಕೆ ಉತ್ತೇಜನ ನೀಡುತ್ತಾ, ಭಾರತದ ಬಹುತ್ವ ಮತ್ತು ವೈವಿಧ್ಯಮಯ ಸಾಮಾಜಿಕ ಸ್ವರೂಪವನ್ನು ದುರ್ಬಲಗೊಳಿಸುತ್ತಿರುವಾಗ ವಿದೇಶಿ ನೆಲದಲ್ಲಿ ನಿಂತು ವೈವಿಧ್ಯತೆಯನ್ನು ರಕ್ಷಿಸುವ ಮಾತುಗಳು ಕೇಳಿ ಬರುತ್ತಿರುವುದು ಹಾಸ್ಯಸ್ಪದ.
ಹಾಗಾದರೆ ವಿದೇಶದಲ್ಲಿ ವೈವಿಧ್ಯತೆಯನ್ನು ರಕ್ಷಿಸುವ ಬಗ್ಗೆ ಮಾತನಾಡುವಾಗ ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ ಅದೇ ತತ್ವವನ್ನು ಭಾರತದಲ್ಲಿ ಏಕೆ ಅನುಸರಿಸಬಾರದು? ನ್ಯೂಯಾರ್ಕ್ನಲ್ಲಿ ಏಕತೆಯ ಭಾಷಣ, ಭಾರತದಲ್ಲಿ ವಿಭಜನೆಯ ರಾಜಕೀಯ ಇದು ಹೇಗೆ ಸಾಧ್ಯ?
ಭಾಗವತ್ ಅವರೇ, ಭಾರತ ನಿಮ್ಮ ಮಾತುಗಳನ್ನೂ, ನಿಮ್ಮ ಕಾರ್ಯಗಳನ್ನೂ ಗಮನಿಸುತ್ತಿದೆ.
ಬೋಧಿಸುವುದನ್ನ ಬಿಟ್ಟು ಮೊದಲು ಆಚರಿಸಿ” ಎಂದು ಚಾಟಿ ಬೀಸಿದ್ದಾರೆ.
