Homeಜಿಲ್ಲೆಎಐ ಯುಗದಲ್ಲಿ ಮಾನವೀಯತೆ ಗುಣಗಳ ಬೆಳೆಸಲು ಶಿಕ್ಷಕರಿಂದ ಮಾತ್ರ ಸಾಧ್ಯ

ಎಐ ಯುಗದಲ್ಲಿ ಮಾನವೀಯತೆ ಗುಣಗಳ ಬೆಳೆಸಲು ಶಿಕ್ಷಕರಿಂದ ಮಾತ್ರ ಸಾಧ್ಯ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.5

ಇಂದಿನ ಎಐ ಯುಗದಲ್ಲಿ ಒಂದು ಮಗುವಿನ ಮನಸ್ಥಿತಿ ಅರಿತುಕೊಳ್ಳಲು, ಮಾನವೀಯತೆ ಗುಣಗಳ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಕುವೆಂಪು ರಂಗಮAದಿರಲ್ಲಿ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ವೃತ್ತಿ ಸವಾಲಿನ ವೃತ್ತಿ. ಜೀವನ ಪೂರ್ತಿ ಶ್ರಮವಹಿಸಿ ದೇಶಕ್ಕೆ ಉತ್ತಮ ಪ್ರಜೆಯನ್ನು ಕೊಡುಗೆಯಾಗಿ ನೀಡುತ್ತಾರೆ. ಶಾಲೆ ಮಕ್ಕಳನ್ನು ತಮ್ಮ ಮನೆಯಲ್ಲಿ ಮಕ್ಕಳಂತೆ ಕಾಣುತ್ತಾ ಶಿಕ್ಷಣವನ್ನು ಧಾರೆಯೆರೆಯುತ್ತಾರೆ ಎಂದರು.

ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲವೂ ಬದಲಾಗುತ್ತಿದೆ. ಆದರೆ ಬದುಕಿಗೆ ಬೆಳಕು ಮತ್ತು ಜ್ಞಾನ ನೀಡುವ ಜಾಗ ಮಾತ್ರ ಬದಲಾಗಿಲ್ಲ. ಗೂಗಲ್ ನಮಗೆ ಬೇಕಾದನ್ನು ಕಲಿಸಬಹುದು ಹಾಗೂ ನಮ್ಮ ಪಶ್ನೆ ಸಾವಿರಾರು ಉತ್ತರವನ್ನು ನೀಡಬಹುದು. ಆದರೆ ಜ್ಞಾನದ ಬೆಳಕು ನೀಡಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳಿದ್ದು, ಉತ್ತಮ ಮಕ್ಕಳನ್ನು ಈ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯ ಕಿರಿಯ, ಹಿರಿಯ, ಪ್ರೌಢ ಶಾಲೆಗಳಲಿರುವ ಉತ್ತಮ ಮತ್ತು ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಗೌರವಸುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ 21 ಉತ್ತಮ ಮತ್ತು ಅತ್ಯುತ್ತಮ ಶಿಕ್ಷಕರುಗಳಿಗೆ, 31 ವಿಶೇಷ ಉತ್ತಮ ಶಿಕ್ಷಕರುಗಳಿಗೆ ಹಾಗೂ 84 ನಿವೃತ್ತ ಶಿಕ್ಷಕರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಗ್ಯಾರಂಟಿ ಯೋಜನೆ ಪ್ರಾಧಿಕಾರಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಎಂಎಲ್‌ಸಿ ಬಲ್ಕೀಶ್ ಬಾನು, ಎಸ್ಪಿ ನಿಖಿಲ್.ಬಿ, ಡಿಸಿ ಪ್ರಭುಲಿಂಗ ಕವಳಕಟ್ಟಿ, ಜಿ.ಪಂ ಸಿಇಓ ಹೇಮಂತ್ ಇನ್ನಿತರರು ಇದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments