ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.5
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಶಿವಮೊಗ್ಗದ ಬರಹಗಾರ್ತಿ, ಸಂಘಟಕಿ ಡಾ ಹಸೀನಾ ಹೆಚ್.ಕೆ ಅವರಿಗೆ ರಾಷ್ಟ್ರೀಯ ಗಜಲ್ ಸಿರಿ ಪ್ರಶಸ್ತಿ ಲಭಿಸಿದೆ.
ಕನ್ನಡ ಗಜಲ್ ರಚನೆ, ಅಧ್ಯಯನ, ವಿಮರ್ಶೆ, ಉಪನ್ಯಾಸದ ಜೊತೆಗೆ ಹಲವು ಗಜಲ್ ಸಂಭAದಿತ ಸಮ್ಮೇಳನದ ಆಯೋಜನೆಯ ಮುಖಾಂತರ ಕನ್ನಡ ಗಜಲ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ, ಡಾ.ಹಸೀನಾ ಹೆಚ್.ಕೆ ಅವರಿಗೆ ಅಕ್ಷರ ದೀಪ ಫೌಂಡೇಶನ್ ಗದಗ ಹಾಗೂ ಸರ್ವ ಗಜಲ್ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಸೆ.6 ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ “ರಾಷ್ಟ್ರೀಯ ಗಜಲ್ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುವುದು ಎಂದು ಸರ್ವಧ್ಯಕ್ಷರಾದ ಡಾ. ಶ್ರೀಶೈಲ ಮಾದಣ್ಣವರರು ತಿಳಿಸಿದ್ದಾರೆ.
ಡಾ. ಹಸೀನಾ ಅವರಿಗೆ ಈ ಪ್ರಶಸ್ತಿ ಬಂದಿರುವುದಕ್ಕೆ ಅವರ ಅಭಿಮಾನಿ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ
