Homeಜಿಲ್ಲೆಪತ್ರಕರ್ತರ ಮೇಲೆ ಹಲ್ಲೆ:ತನಿಖೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

ಪತ್ರಕರ್ತರ ಮೇಲೆ ಹಲ್ಲೆ:ತನಿಖೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.5

ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರಾದ ಶಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ತನಿಖೆಗೆ ಆಗ್ರಹಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮತಿಯ ಅಲ್ಪಸಂಖ್ಯಾತರ ವಿಭಾಗದಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಪ್ರಮುಖ ಅಂಗ. ಸಂವಿಧಾನ ಪ್ರತಿಯೊಬ್ಬ ನಾಗರೀಕರಿಗೂ ಸಮಾನತೆ, ಘಟನೆ ನೀಡಿದೆ. ಪತ್ರಿಕೋದ್ಯಮಕ್ಕೂ ವಿಶೇಷ ಸ್ಥಾನವಿದ್ದು, ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವು ಪ್ರಜಾಪ್ರಭುತ್ವ ಪ್ರಮುಖ ಆಧಾರವಾಗಿದೆ. ಆದರೆ ಇಂತಹ ಪತ್ರಿಕೋದ್ಯಮಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

ಗಮನಿಸಿ: ಡಾ.ಹಸೀನಾ ಗೆ ರಾಷ್ಟ್ರೀಯ ಗಜಲ್ ರತ್ನ ಪ್ರಶಸ್ತಿ

ಇತ್ತೀಚಿಗೆ ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ 4 ಪಿಎಂ ನ್ಯೂಸ್ ನೆಟ್‌ವರ್ಕ್ನ ಪತ್ರಕರ್ತರಾದ ಶಹೀನ್ ಖಾನ್ ಮತ್ತು ನಫೀಸಾ ಖಾನ್ ಅವರೊಂದಿಗೆ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲ ಹಲ್ಲೆ ಮತ್ತು ದೌರ್ಜನ್ಯ ಎಸಗಿದ್ದಾರೆ. ಇದು ಕೇವಲ ಪತ್ರಿಕೋದ್ಯಮಕ್ಕೆ ಮಾಡಿದ ಕಳಂಕವಲ್ಲ. ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.

ಪತ್ರಕರ್ತರ ವೃತ್ತಿಪರ, ಸ್ವಾತಂತ್ರ್ಯ, ಮಹಿಳೆಯ ಘನತೆ ಹಾಗೂ ನಾಗರೀಕರ ಮೂಲಭೂತ ಹಕ್ಕುಗಳ ಸಂಬಂಧಿಸಿದಂತೆ ಗಂಭೀರ ವಿಷಯ ಇದಾಗಿದೆ. ಆದರೆ ಧರ್ಮ ಅಥವಾ ಸಮುದಾಯ ಆಧಾರದ ಮೇಲೆ ಈ ತಾರತಮ್ಯಗಳು ನಡೆದಿರಬಹುದಾಗಿದೆ. ಆದರಿಂದ ನಿಷ್ಪಕ್ಷಪಾತವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ಆದರಿಂದ ಅಂದು ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಪರಿಗಣಿಸಿ ಅರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ತಪ್ಪಿತಸ್ಥ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವವನ್ನು, ಪತ್ರಿಕಾ ಸ್ವಾತಂತ್ರವನ್ನು ಆ ಮೂಲಕ ರಕ್ಷಣೆ ಮಾಡಬೇಕೆಂದು ರಾಷ್ಟ್ರಪತಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ವಾಹಿದ್ ಅಡ್ಡು, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಟೆಲಾ ಮಾರ್ಟಿನ್, ನಯಜ್ ಅಹಮದ್, ಶಫಿವುಲ್ಲ, ಸೈಯದ್ ಜಮೀಲ್, ಜಫ್ರುಲ್ಲಾ, ಮಹಮದ್ ಶಫಿ, ಸೈಯದ್ ನೂರುಲ್ಲಾ, ಸೈಯದ್ ಜಬೀರಾ, ನೇತಾಜಿ ಇಕ್ಬಾಲ್, ತನ್ವಿರ್ ಅಹಮದ್, ಸೈಯದ್ ಜಮೀಲ್, ಮಕ್ಬುಲ್ ಅಹಮದ್, ಜಫ್ರುಲ್ ಖಾನ್ ಸತ್ತರ್, ಅನ್ವರ್ ಕುರೇಶಿ, ಜಫ್ರುಲ್ ಶರೀಫ್ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments