Homeಜಿಲ್ಲೆಸಿಎಂಗೆ ಬಾಲಕಿ ಪತ್ರ ಬರೆದ ಬೆನ್ನಲ್ಲೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ಸಿಎಂಗೆ ಬಾಲಕಿ ಪತ್ರ ಬರೆದ ಬೆನ್ನಲ್ಲೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

Spread the love

ಹನೂರು.ಜು.9: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಳನಿಮೇಡು ಗ್ರಾಮದ ೫ ನೇ ತರಗತಿಯ ವರ್ಣೀಕ  ತಮ್ಮ ತಾಯಿ-ತಂದೆಗಳನ್ನು ಕೃಷಿಯಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಸಹಿಸಲಾಗದೆ, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

“ಇತ್ತೀಚಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿತಗೊಂಡಿದೆ. ಈ ಕಾರಣದಿಂದ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ನಿಂತAತಾಗಿದ್ದು, ಜನರು ಬೇಸಾಯ ಬಿಟ್ಟು ಉದ್ಯೋಗಕ್ಕಾಗಿ ಇತರೆ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸ್ಥಿತಿಯನ್ನು ನೋಡಿದಾಗ ನಮ್ಮ ಮನಸ್ಸು ತೀವ್ರವಾಗಿ ದುಃಖಗೊಂಡಿದೆ, ಹನೂರು ತಾಲೂಕಿನ ರಾಮಾಪುರ ಹೋಬಳಿಯ ಎಲ್ಲ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಬೇಕು. ಈ ಮೂಲಕ ಭೂಮಿಯಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು.


ಈ ಪುಟ್ಟ ಮಕ್ಕಳ ಸಾಮಾಜಿಕ ಜಾಗೃತಿ ಹಾಗೂ ಪರಿಸರದ ಬಗ್ಗೆ ಅವರ ಚಿಂತನಶೀಲತೆಯು ರಾಜ್ಯದ ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇದರ ಬೆನ್ನೆಲ್ಲೆ ಮಂಗಳವಾರ ಕೆಂಪಯ್ಯನಹಟ್ಟಿ ಹಾಗೂ ಪಳನಿಮೇಡು ಗ್ರಾಮಕ್ಕೆ ಜಿ.ಪಂ ಸಿಇಓ ಮೋನಾ ರೋತ್ ಹಾಗೂ ಅಧಿಕಾರಿಗಳು ದೌಡಾಯಿಸಿದ್ದಾರೆ.


ಗ್ರಾಮಗಳನ್ನು ವೀಕ್ಷಿಸಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲು ಸಹ ಕುಡಿಯುವ ನೀರಿಗೆ ಸಮಸ್ಯೆಯಾದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಎಂದು ತಾಕೀತು ಮಾಡಿದರು.
ತಾಲೂಕಿನ ಕೆಂಪಮ್ಮನಹಟ್ಟ, ದೊಡ್ಡಾಲತ್ತೂರು ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರು ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಮಾಹಿತಿ ಪಡೆದರು.
ಆ ನಿಟ್ಟಿನಲ್ಲಿ ಕುಡಿಯುವ ನೀರು ಸ್ವಚ್ಛತೆಯಿಂದ ಕೂಡಿದಿಯೆ ಇಲ್ಲವೇ ಎಂಬುದನ್ನು ಸ್ಥಳದಲ್ಲಿದ್ದ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ ಕುಡಿಯುವ ನೀರಿಗಾಗಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೂ ಕುಡಿಯುವ ನೀರು ಸಿಗುವಂತೆ ಕಾರ್ಯ ಕೈಗೊಳ್ಳಬೇಕೆಂದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುತೊರೆ ಜಲಾಶಯ ನೀರು ಹರಿಸಲು ಚಿಂತನೆ:

ಇಲ್ಲಿನ ಜನರಿಗೆ ಉಡುತೊರೆ ಹಳ್ಳದ ಜಲಾಶಯ ನೀರು ಹರಿಯುವಂತಾಗದರೆ ಬೋರ್ವೆಲ್‌ಗಳು ಮತ್ತೆ ಪ್ರಾರಂಭವಾಗಲಿದೆ. ಹಾಗಾಗಿ ಅದರ ಬಗ್ಗೆ ಸಹ ನಾವು ಚಿಂತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಿ.ಪಂ ಸಿಇಓ ಮೋನಾ ರೋತ್ ತಿಳಿಸಿದರು. 

ಹನೂರು ತಾ.ಪಂ ಸಿಇಓ ಉಮೇಶ್, ಹಾಗೂ ದೊಡ್ಡಾಲತ್ತೂರು ಗ್ರಾ.ಪಂ ಪಿಡಿಒ ಸೆಲ್ವರಾಜು ಹಾಗೂ ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments