ಬೆಂಗಳೂರು, ಜು.10: ಸಿಎಂ, ಡಿಸಿಎಂ ಕುರ್ಚಿ ಗುದ್ದಾಟದಲ್ಲಿ ಕಾಂಗ್ರೆಸ್ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಗುರುವಾರ ಮಾಧ್ಯಮಗಾರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಇಷ್ಟೊಂದು ಹದಗೆಟ್ಡಿದ್ರು ಕೂಡ, ಗ್ಯಾರಂಟಿ ಮಾತು ಕೊಟ್ಟಂತೆ ಜನರಿಗೆ ತಲುಪುತ್ತಿಲ್ಲ.
ನರೇಗಾದಲ್ಲಿ ಕೆಲಸ ಮಾಡಿದವರಿಗೆ ಆರು ತಿಂಗಳು ಆದರೆ ವೇತನ ಕೊಡುತ್ತಿಲ್ಲ, ಆದರೂ ರಾಜಕೀಯ ದುರದ್ದೇಶದಿಳದ ಕೇಂದ್ರದ ಮೇಲೆ ಆರೋಪ ಮಾಡ್ತಾರೆ ಎಂದರು.
ಇವಾಗ ಸಿದ್ದರಾಮಯ್ಯ ಐದು ವರ್ಷ ನಾನೇ ಎಂದಿದ್ದಾರೆ. ಪಾಪ ಡಿಕೆ ಶಿವಕುಮಾರ್ ಟವಲ್ ಹಾಕಿದ್ದೇ ಹಾಕಿದ್ದು, ಆದರೆ ಆ ಟವಲ್ ಎಲ್ಲೋ ಹೋಯ್ತೋ ಗೊತ್ತಿಲ್ಲ. ಡಿಕೆ ಶಿವಕುಮಾರ್ ಗೂ ಎಳ್ಳು ನೀರು ಬಿಟ್ಟಿದ್ದಾರೆ. ಪಾಪ ಡಿಕೆ ಶಿವಕುಮಾರ್ ಗೆ ಈ ರೀತಿ ಆಗಬಾರದಿತ್ತು ಎಂದು ಲೇವಡಿ ಮಾಡಿದರು.
