ಶಿವಮೊಗ್ಗ, ಜು.10: ಮಳೆಯಿಂದ ಜಲಾಶಯ ತನ್ನ ನೈಜ ಸೊಬಗನ್ನು ಮರಳಿ ಪಡೆದುಕೊಂಡಿದೆ. ಇದರಿಂದ ಉಳುವ ಯೋಗಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು.
ಗಾಜನೂರು ತುಂಗಾ ಜಲಾಶಯಕ್ಕೆ ಇಂದು ಭೇಟಿ ನೀಡಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಗಾಜನೂರಿನ ತುಂಗಾ ಜಲಾಶಯದ ತುಂಬಿರುವುದರಿಂದ ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ರೈತರ ಜೀವನಾಡಿ ಜೀವಕಳೆ ಮರಳಿ ಬಂದಂತಾಗಿದೆ.
ಈ ವರ್ಷವೂ ಮಳೆರಾಯನ ಕೃಪೆಯಿಂದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಆಗಿದೆ . ಈ ಪರಿಣಾಮವಾಗಿ
ಈ ಭಾಗದ ಭತ್ತ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಮೂಡಿದೆ. ಭಯದ ಕಾರ್ಮೋಡ ದೂರವಾಗಿ ರೈತರಿಗೆ ಭರವಸೆಯ ಮಂದಹಾಸ ಮೂಡಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಅರಗ ಜ್ಞಾನೇಂದ್ರ, ಚನ್ನಬಸಪ್ಪ ,ಡಿ.ಎಸ್.ಅರುಣ್ ರಾಜ್ಯ ಪ್ರಕೋಷ್ಟಗಳ ಸಂಯೋಜಕ ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ , ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
