Homeಜಿಲ್ಲೆಸಿಎಂಗೆ ತಡವಾಗಿ ಮಾಹಿತಿ ನೀಡಿದ್ದಾರೆ: ಸತೀಶ್

ಸಿಎಂಗೆ ತಡವಾಗಿ ಮಾಹಿತಿ ನೀಡಿದ್ದಾರೆ: ಸತೀಶ್

Spread the love

ಚಿತ್ರದುರ್ಗ ,ಜು.13: ಸಿಗಂದೂರು ಬ್ರೀಡ್ಜ್  ಉದ್ಘಾಟಿನೆಗೆ ಸಂಬಂಧಿಸಿದಂತೆ  ಸಿದ್ದರಾಮಯ್ಯ ಅವರಿಗೆ ತಡವಾಗಿ ಮಾಹಿತಿ ನೀಡಿದ್ದಾರೆ. ಆದರಿಂದ ಅವರ ಪರವಾಗಿ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುವೆ  ಎಂದು PWD ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗದಲ್ಲಿ ಭಾನುವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು,  ಸಿಗಂದೂರು ಬ್ರೀಡ್ಜ್  ಉದ್ಘಾಟಿನೆಗೆ ಸಿ ಎಂ ಸಿದ್ದರಾಮಯ್ಯ ಅವರಿಗೆ ತಡವಾಗಿ ಮಾಹಿತಿ ನೀಡಿದ್ದಾರೆ. ಮೊದಲೆ ಅವರಿಗೆ ಇಂಡಿ ಕ್ಷೇತ್ರದಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದು,  ಸೇತುವೆ ಉದ್ಘಾಟನೆಗೆ ಬರಲು ಆಗುವುದಿಲ್ಲ ಎಂದರು.
ಶಿವಮೊಗ್ಗದ ಕಾರ್ಯಕ್ರಮ ನಿಗದಿ ಆಗುವ ನಾಲ್ಕೈದು ದಿನಗಳ ಮುಂಚೆಯೇ ಇಂಡಿ ಕ್ಷೇತ್ರದ ಕಾರ್ಯಕ್ರಮ ಫಿಕ್ಸ್ ಆಗಿದೆ. ಕೇಂದ್ರದ ಯೋಜನೆ ಚಾಲನೆ ನೀಡುವ ವೇಳೆ ರಾಜ್ಯ ಸರ್ಕಾರದ ಗಮನಕ್ಕೆ ಹೇಳಬೇಕು. ಇದರಿಂದ ಸಿಎಂ ಮತ್ತು ಮಂತ್ರಿಗಳು ಕಾರ್ಯಕ್ರಮಕ್ಕೆ ಹೋಗಲು ಅನುಕೂಲ ಆಗುತ್ತದೆ ಎಂದು ತಿಳಿಸಿದ್ದೇವೆ.
ಆದರೂ ಅವರು ಗಮನಕ್ಕೆ ತರದೆ ದಿಢೀರ್ ಆಗಿ ಕಾರ್ಯಕ್ರಮ ಮಾಡಲಾಗಿದೆ.
ಕೇಂದ್ರ ಸಚಿವರು ಬರುತ್ತಿರುವ ಕಾರಣದಿಂದ , ಅವರಿಗೆ ಗೌರವ ನೀಡಲು ಸಿ ಎಂ ಪರವಾಗಿ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ ಎಂದು ತಿಳಿಸಿದರು.

.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments