ಹಾಸನ,ಜು.14: ಸಿಗಂಧೂರು ಸೇತುವೆ ಉದ್ಘಾಟನೆಯ ಮಾಹಿತಿ ಕೊರತೆಯಿಂದ ಸಿ ಎಂ ಕಾರ್ಯಕ್ರಮಕ್ಕೆ ಹೋಗದೆ ಇರಬಹುದು. ಆದರೆ ಉದ್ಘಾಟನೆ ದಿನಾಂಕವನ್ನು ಬದಲಿಸಿದರೆ ಚೆನ್ನಾಗಿರುತ್ತೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಹಾಸನದಲ್ಲಿ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದಲ್ಲಿ ಸಂವಿಧಾನ ಬದ್ದವಾಗಿ ಆಡಳಿತ ಇದೆ. ಅದರಂತೆ ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದವರು ಮುಖ್ಯಮಂತ್ರಿ ಕರಿಯಬಾರದು ಎಂದು ಉದ್ದೇಶಪೂರ್ವಕವಾಗಿ ಮಾಡಿದ್ರೆ ಅದು ಖಂಡನಾರ್ಹ. ಮಾಹಿತಿ ಕೊರತೆಯಿಂದ ಕೆಲವೊಮ್ಮೆ ಮುಖ್ಯಮಂತ್ರಿ ಉದ್ಘಾಟನೆಗೆ ಹೋಗದೆ ಇರಬಹುದು. ಆದರೆ ಸಿಎಂ ಈ ಕುರಿತು ಪತ್ರ ಬರೆದ ಮೇಲೆ ಕಾರ್ಯಕ್ರಮ ಮುಂದೂಡಬಹುದಿತ್ತು ಎಂದು ತಿಳಿಸಿದರು.
