Homeಅಪರಾಧಧರ್ಮಸ್ಥಳ ಪ್ರಕರಣದಲ್ಲಿ ಯಾವುದೇ ತೊಡಕಿಲ್ಲ: ಡಿಕೆಶಿ

ಧರ್ಮಸ್ಥಳ ಪ್ರಕರಣದಲ್ಲಿ ಯಾವುದೇ ತೊಡಕಿಲ್ಲ: ಡಿಕೆಶಿ

Spread the love

ಬೆಂಗಳೂರು, ಜು.21: 20 ವರ್ಷಗಳ ಪ್ರಕರಣ ಬಗ್ಗೆ ಕಾನೂನುಬದ್ಧವಾಗಿ ತನಿಖೆ ಆಗಬೇಕು.ಯಾರೇ ತಪ್ಪು ಮಾಡಿದ್ರೂ ಕ್ರಮ‌ ತಗೋಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದ ಪ್ರಕರಣ ಒಂದು ಕಾಲಮಿತಿಯಲ್ಲಿ ತನಿಖೆ ಆಗಬೇಕು. ಹಾಗಂತ ಯಾರನ್ನೋ ಬಲಿ ಮಾಡೋದು ಬೇಡ.

ಧರ್ಮಸ್ಥಳದ ಹಿನ್ನೆ, ಪರಂಪರೆ, ಭಕ್ತರ ಬಗ್ಗೆ ಸ್ಥಳೀಯ ಪೊಲೀಸರಿಗೆ ಗೊತ್ತಿದೆ. ಅನಾಮಧೇಯ ವ್ಯಕ್ತಿಗೆ ಯಾರಿಂದ ಒತ್ತಡ ಇತ್ತು ಅಂತ ಹೇಳಬೇಕು. ಆ ದಿಕ್ಕಿನಲ್ಲಿ ತನಿಖೆ ಆಗಬೇಕು.

ಅಲ್ಲಿ ನಡೆದಿರುವ ಪ್ರಕರಣದಲ್ಲಿ ಅನಾಮಧೇಯ ವ್ಯಕ್ತಿ ಹೇಳಿದ ವಿಚಾರದಲ್ಲಿ ಕ್ರಮ ತಗೊಳ್ಳತ್ತೇವೆ. ಅದಕ್ಕೇನೂ ತೊಡಕಿಲ್ಲ ಎಂದರು.

ಆದ್ರೆ ಹಾಗಂತ ಪುರಾತನ, ಪ್ರಸಿದ್ಧ ಧಾರ್ಮಿಕ ಸಂಸ್ಥೆಯ ಹೆಸರನ್ನು ಈ ನೆಪದಲ್ಲಿ ಕೆಡಿಸುವ, ನಂಬಿಕೆ ಕೆಡಿಸುವ ಕೆಲಸ ಆಗಬಾರದು. ಇದಕ್ಕೆ ಸರ್ಕಾರ ಅವಕಾಶ ಮಾಡಿ ಕೊಡಬಾರದು ಎಂದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments