ಶಿವಮೊಗ್ಗ,ಜು.23: ಮೈತ್ರಿ ಬಹಳ ಬಲವಾಗಿ ಮುಂದುವರಿಯುತ್ತಿದ್ದು, ಇದೇ ಮೈತ್ರಿಯ ಮೂಲಕ
ಮುಂದಿನ 2028ರ ಚುನಾವಣೆಯಲ್ಲಿ ಕೂಡ ಎದುರಿಸುತ್ತೇವೆ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಬುಧವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಮೈತ್ರಿಯಲ್ಲಿ ಯಾವುದೇ ರೀತಿಯ ಅಪಸ್ವರ ಹಾಗೂ ಬಿರುಕು ಉಂಟುಮಾಡುವ ಪ್ರಶ್ನೆಯೇ ಇಲ್ಲ.
ಇದು ದೇವೇಗೌಡರು ತೆಗೆದುಕೊಂಡ ನಿರ್ಧಾರ ಹಾಗಾಗಿ ಈ ಮೈತ್ರಿ ಶಾಶ್ವತವಾಗಿ ಉಳಿಯುತ್ತದೆ. ಈ ಮೂಲಕ ನರೇಂದ್ರ ಮೋದಿ ಅವರಿಗೆ ಶಕ್ತಿಯನ್ನು ತುಂಬುವಂತ ಕೆಲಸ ಮಾಡಲಾಗುತ್ತಿದ್ದು,ಗ್ರಾಮೀಣ ಎನ್ ಡಿ ಎ ಗೆ ಬೆಂಬಲವಾಗಿ ನಾವು ನಿಂತಿದ್ದೇವೆ ಎಂದರು.
ಕಾಂಗ್ರೇಸ್ ಸರ್ಕಾರದ ದುರಾಢಿಳಿತ ಹಾಗೂ ಭ್ರಷ್ಟಾಚಾರ ಹಗರಣವಾಗಿದೆ. ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ವಿಧಿಸುತ್ತಿದ್ದಾರೆ. ಹಾಗಾಗಿ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಬೇಕರಿಗಳ ಮೇಲೆ ಇವರ ದೌರ್ಜನ್ಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕೂಡ ಶೋಭೆ ತರುವಂತದ್ದಲ್ಲ ಎಂದರು.
50 ಕೋಟಿ ಶಾಸಕರ ನಿಧಿಗೆ ನೀಡಿದ್ದು, ಇದು ಕೇವಲ ಕಾಂಗ್ರೇಸ್ ಎಂಎಲ್ ಎ ಗೆ ಮಾತ್ರ ಅನ್ವಯವಾಗಿದೆ. ಹಾಗಾದರೆ ಬಿಜೆಪಿ, ಜೆಡಿಎಸ್ ಎಂಎಲ್ ಎ ಯಾಕೆ ಇಲ್ಲ?.ಇದು ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಟೀಕಿಸಿದರು
