Homeಜಿಲ್ಲೆಸರ್ಕಾರಿ ಶಾಲೆ ಬಿಡಿಸಲು ಮುಂದಾದ ಪೋಷಕರು,  ಕಾರಣವೇನು??

ಸರ್ಕಾರಿ ಶಾಲೆ ಬಿಡಿಸಲು ಮುಂದಾದ ಪೋಷಕರು,  ಕಾರಣವೇನು??

Spread the love

ಮಂಡ್ಯ, ಜು.24: ಲಿಂಗಾಯತ ಸಮುದಾಯಕ್ಕೆ ಸೇರಿದ ಬಹುತೇಕ ಮಕ್ಕಳು ಸರ್ಕಾರಿ ಶಾಲೆಯಲ್ಲಿ  ಓದುತ್ತಿರುವ ಹಿನ್ನೆಲೆ ಮೊಟ್ಟೆ ವಿತರಣೆ ಖಂಡಿಸಿ ಟಿಸಿ ಪಡೆಯಲು ಪೋಷಕರು ಮುಂದಾಗಿರುವ ಘಟನೆ  ಆಲಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ 122 ಮಕ್ಕಳು ಓದುತ್ತಿದ್ದಾರೆ. ಅದರಲ್ಲಿ 60ಕ್ಕೂ ಹೆಚ್ಚು ಮಕ್ಕಳ ಟಿಸಿ ಪಡೆಯಲು ಪೋಷಕರು ಮುಂದಾಗಿದ್ದು, ಈಗಾಗಲೇ 45 ಮಕ್ಕಳ ಟಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯದಲ್ಲೆ ಅತಿ ದೊಡ್ಡ ಬೆಂಕಿ ಕೊಂಡ ನಡೆಸುವ ಆಚರಣೆಯಲ್ಲಿ ಪ್ರಸಿದ್ದಿ ಪಡೆದಿರುವ ವೀರಭದ್ರೇಶ್ವರ ದೇವಸ್ಥಾನ ಶಾಲೆಯ ಕೂಗಳತೆ ದೂರದಲ್ಲಿರುವ ಇದೆ.
2017 ರಲ್ಲಿ ಮೊಟ್ಟೆ ನೀಡಲು ಸರ್ಕಾರ ಮುಂದಾದಾಗ ಗ್ರಾಮಸ್ಥರು ಈ ಕಾರಣದಿಂದ ನಿರಾಕರಿಸಿದ್ದರು.

ಕೆಲ ದಿನಗಳ ಹಿಂದೆ ಗ್ರಾಮದ ಕೆಲ ವ್ಯಕ್ತಿಗಳು ಮೊಟ್ಟೆಗೆ ಬೇಡಿಕೆ ಇಟ್ಟ ಹಿನ್ನೆಲೆ ಶಾಲೆಯಲ್ಲಿ ಇದ್ದೀಗ ಮೊಟ್ಟೆ ಬೇಯಸಲಾಗಿತ್ತು. ಆದರಿಂದ  ಶಾಲೆಗೆ ಮಕ್ಕಳನ್ನ ಕಳುಹಿಸಲು ಪೋಷಕರು  ನಕಾರ ಮಾಡಿದ್ದು,
80 ಕ್ಕೂ ಹೆಚ್ಚು ಮಕ್ಕಳ ಟಿಸಿ ಪಡೆದು ಬೇರೆ ಸ್ಕೂಲಿಗೆ ಸೇರಿಸಲು ಪೋಷಕರ ನಿರ್ಧಾರಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments