Homeಜಿಲ್ಲೆಅಭಿವ್ಯಕ್ತಿ ಸ್ವಾತಂತ್ರ್ಯನಿತ್ಯ ಹರಣವಾಗುತ್ತಿದೆ : ದಿನೇಶ್ ಅಮಿನ್ ಮಟ್ಟು

ಅಭಿವ್ಯಕ್ತಿ ಸ್ವಾತಂತ್ರ್ಯನಿತ್ಯ ಹರಣವಾಗುತ್ತಿದೆ : ದಿನೇಶ್ ಅಮಿನ್ ಮಟ್ಟು

Spread the love

ಶಿವಮೊಗ್ಗ,ಜು.26:  ಇತ್ತೀಚಿನ ವಿದ್ಯಮಾನದಲ್ಲಿ ಉದ್ಯಮಿಗಳು  ತಮ್ಮ ಸಾಮ್ರಾಜ್ಯ ರಕ್ಷಣೆಗೆ ಮಾಧ್ಯಮಕ್ಕೆ ಪ್ರವೇಶ ಮಾಡುತ್ತಿದ್ದು, ಇದರಿಂದ
ಉದ್ಯಮಿ ಮತ್ತು ಧರ್ಮಗುರುಗಳು ಮಾಧ್ಯಮ ಒಂದು ಆಯುಧವಾಗಿದೆ ಬಳಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಆತಂಕ ವ್ಯಕ್ತಪಡಿಸಿದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಶನಿವಾರ  ನಗರ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾ ಪುರಸ್ಕಾರ ಹಾಗೂ ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದರು.


ಉದ್ಯಮಿಗಳು  ಮಾಧ್ಯಮಗಳಿಗೆ ಪ್ರವೇಶ ಮಾಡಿರುವುದು  ಲಾಭಗಳಿಸಲು ಅಲ್ಲ, ತಮ್ಮ ವಿರುದ್ದ ಮಾತನಾಡುವವರನ್ನು  ನಿಯಂತ್ರಿಸುವ ಉದ್ದೇಶದಿಂದ ಬಂದಿದ್ದಾರೆ.  

ದೇಶದಲ್ಲಿ 82 ಸಾವಿರ ಪತ್ರಿಕೆಗಳು ಇದ್ದರೂ ಅವುಗಳ    ಅಭಿವ್ಯಕ್ತಿ ಸ್ವಾತಂತ್ರ್ಯ ನಿತ್ಯ ಹರಣ ಆಗುತ್ತಿದೆ. ಇದರಿಂದ ವಿಶ್ವದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಸೂಚ್ಯಂಕದಲ್ಲಿ ಭಾರತದ 58ನೇ ಸ್ಥಾನದಲ್ಲಿದೆ.

ಈ ಸಮಾಜದಲ್ಲಿ ಕಾರ್ಮಿಕ, ರೈತ, ಮಹಿಳೆ, ಭಕ್ತನಿಗೆ ಪ್ರಶ್ನೆ ಮಾಡದ ಸ್ಥಿತಿಯಲ್ಲಿ ಇದ್ದು, ಉದ್ಯಮಿಗಳು ಹಾಗೂ ಧರ್ಮಗುರುಗಳ  ಅದನ್ನು ಧಮನ ಮಾಡುತ್ತಾ ಬಂದಿದ್ದಾರೆ. ರಾಜಕಾರಣಗಳಿಗೆ ಬೈದರೆ ಅದನ್ನು ದಕ್ಕಿಸಿಕೊಳ್ಳಬಹುದು. ಆದರೆ ಧರ್ಮಗುರುಗಳು ಹಾಗು ಉದ್ಯಮಿಗಳ ಬಗ್ಗೆ ಮಾತನಾಡಿದರೆ ತಲೆ ಹೋಗುತ್ತದೆ. ನಾವೆಲ್ಲ ಬಸವಣ್ಣ ಪರಂಪರೆಯ ಇಂದ ಬಂದವರು ನಮಗೆ ದೇವರ ಕಾಣಲು ಯಾವುದೇ ಏಜೆಂಟ್ ಬೇಕಾಗಿಲ್ಲ. ಹಾಗಾಗಿ ದೇವರು ಬೇರೆ  ಧರ್ಮಗುರುಗಳು  ಬೇರೆ ಎನ್ನುವ ಅರಿವು ನೀವು ಮೂಡಿಸಿಕೊಳ್ಳಬೇಕು ಎಂದರು.

ಮಾಧ್ಯಮ ನಿಜವಾದ ಲಾಭಕ್ಕಾಗಿ ಉದ್ಯಮವಾಗಬೇಕು. ಉತ್ಪಾದನೆಯ ವೆಚ್ಚಕ್ಕಿಂತ ಕಡಿಮೆ ಮಾರಾಟ ಮಾಡುತ್ತಿರುವುದು ರೈತರು ಮತ್ತು ಪತ್ರಕರ್ತರು ಮಾತ್ರ. ಆದರೆ ಓದುಗರು ನಮ್ಮಿಂದ ಪತ್ರಿಕೆ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದ್ದಾರೆ ಅದರಿಂದ ಆಚೆ ಬರಲಿ. ಪತ್ರಕರ್ತರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವಂತಾಗಿದೆ ಅವರಿಗೆ ಯಾವುದೇ  ರಕ್ಷಣೆ ಇಲ್ಲ ಎಂದು ತಿಳಿಸಿದರು.

ಈ ವೇಳೆ ಸಾಧಕ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಸಂಸದ ಬಿ.ವೈ.ರಾಘವೇಂದ್ರ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು,  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ,  ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ರಾಷ್ಟ್ರ ಸಮಿತಿ ಸದಸ್ಯ ಭಂಡಿಗಡಿ ನಂಜುಂಡಪ್ಪ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments