Homeಜಿಲ್ಲೆಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ, ಮುಂಬೈ ಪೊಲೀಸರಿಂದ ತನಿಖೆ: ಗೃಹಸಚಿವ

ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ, ಮುಂಬೈ ಪೊಲೀಸರಿಂದ ತನಿಖೆ: ಗೃಹಸಚಿವ

Spread the love

ದಾವಣಗೆರೆ, ಜು.೨೭: ಮೈಸೂರಿನಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿದ್ದು, ಮುಂಬೈ ಪೊಲೀಸ್ ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಭಾನುವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಎಂಡಿ ಎಂಎ ಡ್ರಗ್ಸ್ ತಯಾರಿಕಾ ಘಟಕ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಂಧಿಸಿದಾಗ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ಮೇರೆಗೆ ಮೈಸೂರಿಗೆ ಮುಂಬೈ ಪೊಲೀಸರು ಬಂದಿದ್ದಾರೆ. ನಮ್ಮ ಪೊಲೀಸರಿಗೂ ರಿಕ್ವೆಸ್ಟ್ ಮಾಡಿಕೊಂಡು ಹಿಡಿದಿದ್ದಾರೆ. ಇದು ನಿಜವಾಗಿಯೂ ಆತಂಕಕಾರಿ ವಿಚಾರ ಮುಂದೆ ಏನು ಕ್ರಮ ಆಗುತ್ತೆ ನೋಡೋಣ, ಕರ್ನಾಟಕದ ಪೊಲೀಸರು ಸಹ ಈ ಬಗ್ಗೆ ತನಿಖೆ ಮಾಡ್ತಾರೆ. ಇದು ನಮ್ಮ ರಾಜ್ಯದಲ್ಲಿ ನಡೆದಿರೋದು, ಅವರು ಎಲ್ಲಿ ಸರಬರಾಜು ಮಾಡಿದ್ದಾರೆ, ಇದು ಹೊಸದಾಗಿ ನಡೀತಿದೆಯಾ ಎಂಬ ಬಗ್ಗೆ ತನಿಖೆ 20 ದಿವಸಗಳಿಂದ ನಡೀತಾ ಇದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments