Homeಜಿಲ್ಲೆಅರಸು ಸಂವಿಧಾನವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದರು: ಪ್ರಶಾಂತ್ ನಾಯಕ್

ಅರಸು ಸಂವಿಧಾನವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದರು: ಪ್ರಶಾಂತ್ ನಾಯಕ್

Spread the love

ಶಿವಮೊಗ್ಗ.ಆ.20: ಅರಸು ಕರ್ನಾಟಕದ ಅಸ್ಮಿತೆ ಹಾಗು ಆನ್ಯನತೆಯಾಗಿದ್ದು, ಇಂದಿಗೂ ರಾಜ್ಯವನ್ನು ಆಳುವ ದೊರೆಗಳೆಲ್ಲಾ ಅರಸುರವರಂತೆ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ  ಎಂದು  ಪ್ರಾಧ್ಯಾಪಕರಾದ ಡಾ.ಜಿ.ಪ್ರಶಾಂತ್ ನಾಯಕ್ ಅಭಿಪ್ರಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಅರಸು ಕೇವಲ ನೆನಪಾಗಿ ಉಳಿದಿಲ್ಲ. ಅವರು  ನಿರಂತರವಾಗಿ ಕಾಡುವಿಕೆಯಾಗಿದ್ದಾರೆ. ಸಾಂಸ್ಕೃತಿಕ ರಾಜಕಾರಣವೇ  ಅರಸು ಅವರನ್ನು ಹಂಬಲಿಸಿದೆ ಪಡೆದಿದೆ. ಈ ನಾಡಿನ ಬಹುಜನ  ಪ್ರಜ್ಞೆ ರೂಪಿಸಿಕೊಳ್ಳಲು ಇವರ ಬಗ್ಗೆ ಬಂದಷ್ಟು ಪುಸ್ತಕ, ಬರಹಗಳು ಇನ್ಯಾವ ರಾಜಕಾರಣಿಗಳ ಬಗ್ಗೆ ಇಲ್ಲ. ಹಾಗಾಗಿ ಅರಸು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಿಂದ ನಮ್ಮೆಲ್ಲರ ಆತ್ಮವಲೋಕನ ಆಗಬೇಕಿದೆ ಎಂದರು.

ಈ ದೇಶದಲ್ಲಿರುವ ಜಾತಿಗಳು ಅಹಂಕಾರವಾಗಿ ಮಾರ್ಪಟ್ಟಿವೆ. ನಮ್ಮ  ಪಕ್ಕದಲ್ಲಿ ಕೂತಿರುವವರು ಯಾವ ಜಾತಿ ಎಂದು ಕೇಳುವ ದುಸ್ಥಿತಿಗೆ  ಬಂದಿದ್ದೇವೆ. ಆದರೆ ತಳ ಸಮುದಾಯದಿಂದ ಬಂದ ಒಬ್ಬ ಜನನಾಯಕ ಎಲ್ಲಾ ಸಂಕಟಗಳನ್ನೂ ನುಂಗಿಕೊಂಡು ಸಾಂಸ್ಕೃತಿಕ ರಾಜಕಾರಣ ರೂಪಿಸಿದ್ದಾರೆ.

1972 ರಲ್ಲಿ  ಮೊದಲ ಸಾಮಾಜಿಕ ನ್ಯಾಯ ಕಲ್ಪಿಸಲು  ವಿಧಾನಸಭೆಯ 133 ಸೀಟ್ ಗಳನ್ನು ತಳ ಸಮುದಾಯದ, ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ  ಹಂಚುವ ಮೂಲಕ ಮೇಲ್ಜಾತಿ ವಿರುದ್ದ ದಿಟ್ಟತನ ತೋರಿದರು. ಹಾಗೂ ಈ ನಿರ್ಣಯದಿಂದ ಆ ಕ್ಷೇತ್ರಗಳಲ್ಲಿನ  ಅಭ್ಯರ್ಥಿಗಳು ಗೆದ್ದು ಶಾಸನ ಸಭೆಗೆ ಆಯ್ಕೆಯಾದರು. ಇಂತಹ ಆಲೋಚನೆಯಿಂದ ಕರ್ನಾಟಕವನ್ನು ಸಾಂಸ್ಕೃತಿಕ ರಾಜಕಾರಣದ ನೆಲೆಯನ್ನಾಗಿ ಪರಿವರ್ತಿಸಿದರು.

ಅರಸು ಅವರೇ ಅಹಿಂದೆ ಕಲ್ಪನೆಯ ಮೂಲ ಕರ್ತೃ. ಆ ಮೂಲಕ ಬಹುಜನರಿಗೆ ಸಾಮಾಜಿಕ, ರಾಜಕೀಯ ಪ್ರಜ್ಞೆ ಮೂಡಿಸಿದರು. ಅರಸು ಅವರು ಯಾವತ್ತು ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ.
ಅಂಬೇಡ್ಕರ್ ಅವರ ಸಂವಿಧಾನವನ್ನು  ಸ್ಪಷ್ಟವಾಗಿ  ಅರ್ಥ ಮಾಡಿಕೊಂಡಿದ್ದರು.ಅದರ ಆಶಯದಂತೆ ತಳ ಸಮುದಾಯದ, ದಲಿತರು ಉದ್ದಾರಕ್ಕಾಗಿ ಜೀತ ಪದ್ದತಿ ನಿರ್ಮೂಲನೆ ಕಾಯ್ದೆ,  ಮಲ ಹೊರುವ ಪದ್ದತಿ ನಿರ್ಮೂಲನೆ ಕಾಯ್ದೆ ಜಾರಿ ಮಾಡಿದರು. ಇದಲ್ಲದೆ ಉಳುವವನೆ ಭೂ ಒಡೆಯ,  ಹಾವನೂರು ವರದಿಯನ್ನು ಜಾರಿ ತಂದರು.

ಇವತ್ತಿನ ರಾಜಕಾರಣದಲ್ಲಿ ಅನೇಕ ಪಲ್ಲಟವಾಗುತ್ತಿದೆ. ಆದರೆ ಅರಸು ಇದೆಲ್ಲವನ್ನು ಮೀರಿದವರು. ಜನಸಮುದಾಯದಿಂದ ರೂಪಗೊಂಡವರು, ಕರ್ನಾಟಕದಲ್ಲಿ ನೊಂದ ಜನರು, ದೀನ ದಲಿತರು  ಅವರನ್ನು ಸಾಂಸ್ಕೃತಿಕ ನಾಯಕನ್ನಾಗಿ ಮಾಡಿದರು. ಹಾಗಾಗಿ ಅರಸು  ಇಲ್ಲಿಯವರೆಗೂ ಜನರ ಎದೆಯೊಳಗೆ  ಉಳಿದಿದ್ದಾರೆ.

ಹೊಸ ತಲೆಮಾರಿ ಅರಸು ಓದಬೇಕು.ಅವರನ್ನು  ಜಾಗೃತಿ ರೂಪಕವನ್ನಾಗಿ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಜಾಗೃತಿ  ಆದರೆ  ರಾಜಕಾರಣವು ಜಾಗೃತಿಗೊಳ್ಳುತ್ತದೆ  ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments