ಶಿವಮೊಗ್ಗ.ಆ.24: ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವ ಮೂಲಕ ಹಿಂದೂಗಳ ಮತ ಸೆಳೆಯಲು ಮುಂದಾಗುತ್ತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದರು.
ಭಾನುವಾರ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದು ನಾನು. ಇದರಲ್ಲಿ ಪಿತೂರಿ ನಡೆಯುತ್ತಿದೆ ಅದಕ್ಕೆ ಕಡಿವಾಣ ಹಾಕಬೇಕೆಂದು ಶಾಸನ ಸಭೆಯಲ್ಲಿ ತಿಳಿಸಿದೆ.
ಸರ್ಕಾರ ಈ ವಿಚಾರದಲ್ಲಿ ಎಸ್ ಐಟಿ ಮಾಡಿರುವುದು ಒಳ್ಳೆದಾಗಿದೆ. ಕೂಡಲೆ ವರದಿ ಕೊಡಲು ತಿಳಿಸಿದ್ದೇವೆ. ಆದರೆ ಈಗ ಬಿಜೆಪಿ ಓಟ್ ಬ್ಯಾಂಕಿಂಗ್ ಗಾಗಿ ಧರ್ಮಸ್ಥಳದ ಹಿಂದೆ ಬಿದ್ದಿದ್ದಾರೆ. ಬಿಜೆಪಿ ಇಂತಹ ವಿಚಾರವನ್ನಿಟ್ಟುಕೊಂಡೆ ರಾಜಕೀಯ ಮಾಡುತ್ತಾ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಹಿಂದೂ ಯುವಕರಾದ ಹರ್ಷ, ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ರಾಜಕೀಯವಾಗಿ ಬಳಸಿಕೊಂಡು ರಾಜಕೀಯ ಮಾಡಲು ಹೋದರು ಜನರು ಇದನ್ನು ಪರಿಗಣಿಸದೆ 63 ಗೆ ಇಳಿಸಿ ಬುದ್ದಿ ಕಲಿಸಿದ್ದಾರೆ ಎಂದು ಟೀಕಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಅನಾಮಿಕ ಮಾಡಿರುವ ಗೊಂದಲಕ್ಕೆ ಕಾಂಗ್ರೆಸ್ ಹೇಗೆ ಕಾರಣವಾಗುತ್ತೆ. ಮಹೇಶ್ ತಿಮ್ಮರೋಡಿ ಅವರು ಹೇಳಿದ್ದಾರೆ ಇದಕ್ಕೆ ಬಿಜೆಪಿ ಹಣ ಕೊಟ್ಟಿದ್ದಾರೆಂದು. ಈಗ ಎಲ್ಲರಿಗೂ ಬುದ್ದಿ ಕಲಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
