Homeಜಿಲ್ಲೆ1.58 ಕೋ.ರೂ. ಟ್ರಾಫಿಕ್ ದಂಡ ವಸೂಲಿ

1.58 ಕೋ.ರೂ. ಟ್ರಾಫಿಕ್ ದಂಡ ವಸೂಲಿ

Spread the love

1.58 ಕೋ.ರೂ. ಟ್ರಾಫಿಕ್ ದಂಡ ವಸೂಲಿ

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಾತಿಯಲ್ಲಿ ಸರ್ಕಾರ ಶೇ. 50 ರಷ್ಟು ರಿಯಾಯಿತಿ ಘೋಷಣೆ ಮಾಡಿದನ್ವಯ ಶಿವಮೊಗ್ಗ ನಗರ ಪೊಲೀಸರು ಸಂಚಾರಿ ಈ ಚಲನ್ ದಂಡ ಪ್ರಮಾಣದಲ್ಲಿ  1.58.51.750 ರೂ.ಗಳನ್ನು ವಸೂಲಿ ಮಾಡಿದ್ದಾರೆ.

ಟ್ರಾಫಿಕ್ ನಿಯಮಗಳ ಉಲ್ಲಂಘನೆಯಲ್ಲಿ ಇದುವರೆಗೂ ದಂಡ ಪಾವತಿಸದೆ ಇರುವವರಿಗೆ ಆಗಸ್ಟ್ 23 ರಿಂದ ಸೆ. 12 (ಇಂದು) ವರೆಗೆ ಶೇ. 50 ರಷ್ಟು ರಿಯಾಯಿತಿಯಲ್ಲಿ ದಂಡ ವಸೂಲಾತಿ ಗೆ ಸರ್ಕಾರದ ಆದೇಶ ಹೊರಡಿಸಿತ್ತು. ಅದರಂತೆ ಶಿವಮೊಗ್ಗ ಸಂಚಾರಿ ಪೊಲೀಸರು ನೆನ್ನೆ( ಸೆ.11) ವರೆಗೂ ಒಟ್ಟು ದಂಡ ಪ್ರಮಾಣದಲ್ಲಿ ಶೇ. 50 ರಷ್ಟು ವಸೂಲಿ ಮಾಡಿದ್ದು, 34.438 ದಂಡ ಪ್ರಕರಣಗಳಿಂದ ಒಟ್ಟು 1.58.51.750 ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಶೇ. 50ರಷ್ಟು ದಂಡವಸೂಲಾತಿಯ ಅವಧಿ ಇಂದು ಮುಕ್ತಾಯಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments