Homeಜಿಲ್ಲೆಮಕ್ಕಳು ಸಮಾಜಮುಖಿಯಾಗಿ ಬೆಳೆಯಬೇಕು: ಸಿಎಂ

ಮಕ್ಕಳು ಸಮಾಜಮುಖಿಯಾಗಿ ಬೆಳೆಯಬೇಕು: ಸಿಎಂ

Spread the love

ಶಿವಮೊಗ್ಗ,ನ.14:ಮಕ್ಕಳು ಸಮಾಜವನ್ನು ಜಾತ್ಯತೀತ ದೃಷ್ಠಿಯಿಂದ ಕಾಣಬೇಕು. ಹಾಗಾಗಿಯೇ ರಾಜ್ಯದಎಲ್ಲಾ ಶಾಲೆಗಳಲ್ಲಿ ಸಂವಿಧಾನ ಓದು ಆರಂಭಿಸಿದ್ದು, ಇದರಿಂದ ಮಕ್ಕಳಿಗೆ ಸಹಿಷ್ಣುತೆ ಹಾಗೂಸಹಬಾಳ್ವೆಯನ್ನು ಅರಿಯಲು ಸಂವಿಧಾನ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳಾದಸಿದ್ದರಾಮಯ್ಯ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಭಾರತ ಪ್ರಪ್ರಥಮ ಪ್ರಧಾನ ಮಂತ್ರಿಗಳಾದ ಪಂಡಿತ್ಜವಾಹರ ಲಾಲ್ ನೆಹರು ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ಹಾಲ್‌ನಲ್ಲಿ ಆಯೊಜಿಸಿದ್ದ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪೋಷಕ–ಶಿಕ್ಷಕರಮಹಾಸಭೆಯಲ್ಲಿ ಜಿಲ್ಲೆಯ ಹರಮಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆಸಂವಾದ ನಡೆಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳನ್ನು ವೈಜ್ಞಾನಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಬೆಳೆಸಬೇಕು. ಮಕ್ಕಳು ಮಾತ್ರವಲ್ಲದೆಪೋಷಕರು ಕೂಡ ಸಂವಿಧಾನವನ್ನು ಅರಿತುಕೊಂಡು ಮಕ್ಕಳಲ್ಲಿ ಉತ್ತಮ ಭಾವನೆ ಮೂಡಿಸಬೇಕುಎಂದರು.

ಮಕ್ಕಳು ಮುಂದಿನ ಭಾರತದ ಭವಿಷ್ಯಗಳು ಹಾಗಾಗಿ ನಿವೇಲ್ಲಾ ಸಮಾಜದಲ್ಲಿನ ಜಾತಿಪಟ್ಟಭದ್ರಹಿತಾಸಕ್ತರಿಂದ ಎಚ್ಚರಿಕೆಯಾಗಿರಬೇಕು. ಇದರಿಂದ ದೂರ ಉಳಿದು ಸಮಾಜಮುಖಿಯಾಗಿ ಬೆಳೆಯಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ದ್ವೇಷಿಸಬಾರದು. ಯಾವ ಧರ್ಮವೂ ದ್ವೇಷದ ಕುರಿತು ಎಲ್ಲೂಹೇಳಿಲ್ಲ ಎಂದು ಕಿವಿ ಮಾತು ಹೇಳಿದರು.

ಬಡತನ ರೇಖೆಯಿಂದ ಕೆಳಗಿನವರು ಸಬಲರಾಗಬೇಕು. ಖಾಸಗಿ ಶಾಲೆಯಲ್ಲಿ ಓದುವವರ ಸರಿಸಮಾನವಾಗಿಸರ್ಕಾರಿ ಶಾಲೆ ಮಕ್ಕಳು ಓದಬೇಕು. ಮಕ್ಕಳಲ್ಲಿ ಬಡವ ಶ್ರೀಮಂತನೆಂದು ಯಾವುದೇ ತಾರತಮ್ಯಬರಬಾರದು ನಾವೆಲ್ಲ ಸಮಾನರು ಎಂಬ ಭಾವೆನ ಮೂಡಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ತಲುಪಬೇಕು. ಹಾಗಾಗಿ ಸರ್ಕಾರ ಉಚಿತ ಪುಸ್ತಕ, ಯೂನಿಫಾರ್ಮ್, ಶೂ, ಕಾಂಪಸ್ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಡಿಡಿಪಿಐ ಮಂಜುನಾಥ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರಗಳುಮುಖ್ಯವಾಗಿದೆ. ಆದರಿಂದ ಸರ್ಕಾರವು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಹಾಲು, ಮೊಟ್ಟೆತರಕಾರಿಯನ್ನು ನೀಡಲಾಗುತ್ತಿದ್ದು, ಮಕ್ಕಳ ಇದರ ಸಹಪಯೋಗ ಪಡೆದುಕೊಳ್ಳಬೇಕು ಎಂದುತಿಳಿಸಿದರು.

ಮಕ್ಕಳ ಉಂಟಾಗುವ ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಈಯೋಜನೆಯನ್ನು ಜಾರಿ ಮಾಡಿದೆ. ಹಾಲಿನಲ್ಲಿ 3.4 ಗ್ರಾಂ, ಮೊಟ್ಟೆಯಲ್ಲಿ 13 ಗ್ರಾಂ ಹಾಗೂ ತರಕಾರಿಯಲ್ಲಿ2.9 ಗ್ರಾಂ ಪ್ರೋಟಿನ್ ಇದ್ದು, ಇದನ್ನು ಸೇವಿಸುವುದರಿಂದ ಮಕ್ಕಳ ರಕ್ತಹೀನತೆ ಕಡಿಮೆಯಾಗುತ್ತದೆ. ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲಿ ಇದು ಸಹಕಾರಿಯಾಗುತ್ತದೆ ಎಂದು ಮಾಹಿತಿನೀಡಿದರು.

ಕಾರ್ಯಕ್ರಮದಲ್ಲಿ ಬಿಇಓ ರಮೇಶ್, ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ, ಹಳೆಯ ಸಂಘದವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಕಾಶಪ್ಪ, ಶಾಲೆಯ ಶಿಕ್ಷಕರುಗಳು, ಪೋಷಕರು, ಮಕ್ಕಳು ಹಾಗೂಗ್ರಾಮಸ್ಥರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments