ಶಿವಮೊಗ್ಗ ,ಜ.9: ಮುಖಾಮುಖಿ(ಎಸ್‌ಟಿ) ರಂಗ ತಂಡದಿಂದ ಖ್ಯಾತ ರಂಗ ಕಲಾವಿದೆ ಉಮಾಶ್ರೀಅಭಿನಯಿಸಿರುವ ಏಕವ್ಯಕ್ತಿ “ಶರ್ಮಿಷ್ಟೆ” ನಾಟಕ ಜ.11 ರಂದು ಸಂಜೆ 6.30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಶರ್ಮಿಷ್ಟ ನಾಟಕ ಎರಡನೇಬಾರಿ ಪ್ರದರ್ಶನಗೊಳ್ಳುತ್ತಿದ್ದು, ಈ ನಾಟಕ ಯಾಯತಿ, ಪುರು ಮತ್ತು ಶರ್ಮಿಷ್ಟೆಯರ ಮಧ್ಯೆ ಏರ್ಪಡುವತ್ರಿಕೋನ ಸಂಘರ್ಷವಾಗಿದೆ. ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತಾ ಬಿಚ್ಚಿಡುವ ಸತ್ಯಗಳನ್ನು ಅರಗಿಸಿಕೊಳ್ಳಲಾರದೇ ಅತಂತ್ರ ಮಾನಸಿಕ ಸ್ವಾಸ್ಥ್ಯ ಸ್ಥಿತ್ಯಂತರವನ್ನು ವರ್ತಮಾನ ಸಂದರ್ಭದಲ್ಲಿತೆರೆದಿಡುತ್ತದೆ ಎಂದರು.
ಚಿದಂಬರ ರಾವ್ ಜಂಬೆ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ. ಬೇಲೂರು ರಘನಂದ ನ್ರಚಿಸಿದ್ದಾರೆ. ಪ್ರವೇಶ ಶುಲ್ಕ ರೂ.200 ನಿಗದಿಪಡಿಸಲಾಗಿದ್ದು, ಬುಕ್ ಮೈ ಶೋ ಮೂಲಕವೂ ಪ್ರವೇಶಟಿಕೆಟ್ ಪಡೆಯಬಹುದು. ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ನಾಟಕ ಪ್ರದರ್ಶನಆರಂಭವಾಗುತ್ತದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9739964726/9482021074 ಗೆ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಮಂಜು ರಂಗಾಯಣ, ಸಿ.ಎ.ಮಹೇಂದ್ರ, ಶಶಿಕುಮಾರ್ ಸಂದೀಪ್ ಇದ್ದರು.
