ಶಿವಮೊಗ್ಗ,ಜ.9: ರಾಜ್ಯ ಸರ್ಕಾರದಲ್ಲಿ ಹಣವಿಲ್ಲದ ಕಾರಣ ಬಿಜೆಪಿಯ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ಜಿ ಯೋಜನೆಯನ್ನು ಜಾರಿ ಮಾಡಲಾಗದೆ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಶಾಸಕಎಸ್.ಎನ್.ಚನ್ನಬಸಪ್ಪ ಹೇಳಿದರು.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರಾಮ್ ಜಿ ಬಿಲ್ ಜಾರಿ ತಂದಿದ್ದು, ಇದನ್ನು ರಾಜ್ಯ ಸರ್ಕಾರದ ಜಾರಿ ಮಾಡಿಲು ವಿರೋಧ ಮಾಡುತ್ತಿದೆ. ಸರ್ಕಾರದಲ್ಲಿ ಹಣವಿಲ್ಲದ ಕಾರಣ ಇದನ್ನು ಜಾರಿ ಮಾಡದೆ ಕೇಂದ್ರ ಸರ್ಕಾರ ಹೆಸರು ಬದಲಿಸಿದೆ ಎಂದು ನೆಪ ಹೇಳುತ್ತಿದೆ ಎಂದು ದೂರಿದರು.
ನರೇಗಾ ಹೆಸರನ್ನು ರಾಮ್ ಜಿ ಎಂದು ಬದಲಾಯಿಸುವ ಮೂಲಕ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ದಿಮತ್ತು ಯುವಕರಿಗೆ ಉದ್ಯೋಗವನ್ನು ಖಾತ್ರಿ ಮಾಡಲು ಮುಂದಾಗುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರವಿಕಸಿತ ಭಾರತವನ್ನು ನಿರ್ಮಿಸುತ್ತಿದ್ದು, ಇದರಿಂದ ಭಾರತ ದೇಶ ಮುಂದೆ ಸಾಗುತ್ತಿದೆ ಎಂದರು.
ರಾಮ್ ಜಿ ಯೋಜನೆ 2047 ಕ್ಕೆ ಭಾರತ ದೇಶ ಅಭಿವೃದ್ದಿ ಪರಿಕಲ್ಪನೆಯನ್ನು ನೀಡುತ್ತಿದೆ. ಈ ಯೋಜನೆಇಡೀ ಮನುಕುಲಕ್ಕೆ ಬೇಕಾಗಿದೆ. ಆದರಿಂದ 100 ದಿನದ ಉದ್ಯೋಗ ಖಾತ್ರಿಯಲ್ಲಿ 125 ಕ್ಕೆ ಏರಿಸಲಾಗಿದೆ. ಬಜೆಟ್‌ನಲ್ಲಿ 2.86 ಕೋಟಿ ಮೀಸಲಿಡಲಾಗಿದೆ. ಈ ಯೋಜನೆ ಕೆಲವ ಉದ್ಯೋಗ ನೀಡದಲ್ಲದೆ ಗ್ರಾಮೀಣಭಾಗದಲ್ಲಿ ಉತ್ತಮವಾದ ರಸ್ತೆ, ಚರಂಡಿ, ಹಾಗೂ ಡಿಜಿಟಲ್ ವಿಸ್ತರಣೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಜಿಲಾಧ್ಯಕ್ಷ ಎನ್.ಕೆ.ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪಕ್ಷದಪ್ರಮುಖ ಮುಖಂಡರು ಇದ್ದರು
