Homeಅಪರಾಧವಿದ್ಯಾರ್ಥಿನಿಗೆ ದೋಖಾ! ಬೆತ್ತಲೆ ಪೋಟೋ ಬ್ಲಾಕ್ ಮೇಲ್, ಬಂಜಾರ ವಿದ್ಯಾರ್ಥಿ ಸಂಘದ...

ವಿದ್ಯಾರ್ಥಿನಿಗೆ ದೋಖಾ! ಬೆತ್ತಲೆ ಪೋಟೋ ಬ್ಲಾಕ್ ಮೇಲ್, ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಜೈಲುಪಾಲು!

Spread the love

ವಿದ್ಯಾರ್ಥಿನಿಗೆ ದೋಖಾ!
ಬೆತ್ತಲೆ ಪೋಟೋ ಬ್ಲಾಕ್ ಮೇಲ್
ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಜೈಲುಪಾಲು!

 ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್ ಗಿರೀಶ್ ವಿರುದ್ದ ಬೆಂಗಳೂರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ  ತನ್ನದೆ ಸಮುದಾಯದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ , ವಂಚನೆ ನಡೆಸಿದ ಪ್ರಕರಣ ದಾಖಲಾಗಿ. ಜೈಲು ಸೇರಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಾಲೇಜುವೊಂದರಲ್ಲಿ ಬಿ.ಇ ವಿದ್ಯಾಭ್ಯಾಸ ಮಾಡುತ್ತಿರುವ ೧೯ ವರ್ಷದ ವಿದ್ಯಾರ್ಥಿನಿಯೊಬ್ಬಳು ದಿನಾಂಕ 23/1/2025 ರಂದು ಜ್ಞಾನಭಾರತಿ ಪೊಲೀಸ್ ಠಾಣೆ ಹಾಜರಾಗಿ ಗಿರೀಶ್  ತನ್ನನ್ನು ಮದುವೆಯಾಗುವುದಾಗಿ ನಂಬಿಸಿ 25/1/2025  ರಿಂದ ಜುಲೈ 2025 ರ ವರೆಗೂ ನನ್ನನ್ನು  ದೈಹಿಕವಾಗಿ  ಬಳಸಿಕೊಂಡಿದ್ದು, ಇದೀಗ ಮದುವೆಯಾಗದೆ, ನನ್ನ ಖಾಸಗಿ ಪೋಟೊಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರು ನೀಡಿದ್ದಾರೆ.
ಅದರಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಯಡಿ  ಲೈಂಗಿಕವಾಗಿ ದುರ್ಬಳಕೆ, ಆಮಿಷ, ವಂಚನೆ ಪ್ರಕರಣವನ್ನು ದಾಖಲಿಸಿ ಗಿರೀಶ್ ನನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ಏನಿದು ಪ್ರಕರಣ?

 

ಎರಡು ವರ್ಷಗಳ ಹಿಂದೆ ಶಿವಮೊಗ್ಗ ನಗರದ ಸೇಕ್ರೇಡ್ ಹಾರ್ಟ್ ಕಾಲೇಜಿನಲ್ಲಿ  ಪ್ರಥಮ  ಪಿಯುಸಿ ಪ್ರಸ್ತುತ ಗಿರೀಶ್ ವಿರುದ್ದ ದೂರು ನೀಡಿರುವ  ವಿದ್ಯಾರ್ಥಿನಿಗೆ ಪ್ರಾಂಶುಪಾಲನೊಬ್ಬ ಲೈಂಗಿಕ ಕಿರುಕುಳ ನೀಡಿದ ಎನ್ನಲಾದ ಪ್ರಕರಣದಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿದ್ದು,  ಸಂತ್ರಸ್ತ ವಿದ್ಯಾರ್ಥಿನಿ ಪರವಾಗಿ  ನ್ಯಾಯಾಲಯ ವಿಷಯದಲ್ಲಿ ಸಹಾಯ ಮಾಡುವುದಾಗಿ ಪರಿಚಯವಾದ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷನೆಂದು ಕೊಂಡು ಓಡಾಡುತ್ತಿದ್ದ ಗಿರೀಶ್ ಡಿ.ಆರ್  ಬೆಂಗಳೂರಿನಲ್ಲಿ  ಬಿ.ಇ ಓದುತ್ತಿದ್ದ ಈ ವಿದ್ಯಾರ್ಥಿಯನ್ನು ಪ್ರೀತಿಸುವುದಾಗಿ ನಂಬಿಸಿ ಬೆಂಗಳೂರು. ಶಿವಮೊಗ್ಗ, ಮೈಸೂರು ಗಳಿಗೆ ಕರೆದೊಯ್ಯದು ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಮತ್ತು ಮದುವೆಯಾಗುವುದಾಗಿಯೂ ನಂಬಿಸಿದ್ದು , ಇದೀಗ ಮದುವೆಯಾಗುವಂತೆ ಕೇಳಿದರೆ ತನ್ನ ಖಾಸಗಿ ಪೋಟೊಗಳು, ವಾಟ್ಸಾಪ್ ಮೆಸೇಜ್ ಗಳನ್ನು ಸಂಬಂಧಿಕರಿಗೆ ಕಳುಹಿಸಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments