Homeಜಿಲ್ಲೆಜಿಲ್ಲೆಯಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳ ಕೊರತೆ ಇಲ್ಲ : ಡಿಸಿ

ಜಿಲ್ಲೆಯಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳ ಕೊರತೆ ಇಲ್ಲ : ಡಿಸಿ

Spread the love

ಶಿವಮೊಗ್ಗ, ಮಾ.16: ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇವ್ಯತ್ಯಯ ಇರುವುದಿಲ್ಲ. ಕಾರಣದಿಂದ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವವದಂತಿಗಳಿಗೆ ಕಿವಿಗೊಡಬಾರದು ಮತ್ತು ಗಾಬರಿ, ಆತಂಕ ಪಡದೇ ಹೆಚ್ಚುವರಿಯಾಗಿ ದಾಸ್ತಾನುಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲೆಯ ಗ್ರಾಹಕರಿಗೆ ತಿಳಿಸಿದ್ದಾರೆ.

ಹೆಚ್ಚಿನ ಗ್ರಾಹಕರು ಒಂದು ರಿಫಿಲ್ಲಿಂಗ್ ಸಿಲಿಂಡರ್ ಪಡೆದ ನಂತರ ಸಿಂಗಲ್ ಗೃಹ ಬಳಕೆ ಸಿಲಿಂಡರ್‌ಗಾಗಿ25 ದಿನಗಳ ಅಂತರದ ನಂತರ ಮತ್ತು ಡಬ್ಬಲ್ ಸಿಲಿಂಡರ್ ಗೃಹ ಬಳಕೆಯವರು 30 ದಿನಗಳ ನಂತರಮತ್ತೊಂದು ಸಿಲಿಂಡರ್‌ಗಾಗಿ ಬುಕ್ಕಿಂಗ್ ಮಾಡಬೇಕು. ಅದಕ್ಕೂ ಮುಂಚಿತವಾಗಿ ಬುಕ್ಕಿಂಗ್ಮಾಡಬಾರದು. ಎಲ್.ಪಿ.ಜಿ ಅಡುಗೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ ಉಪನಿರ್ದೇಶಕರು, ಆಹಾರನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಿವಮೊಗ್ಗ ಇಲ್ಲಿ ಸಹಾಯವಾಣಿಯನ್ನುತೆರೆಯಲಾಗಿದ್ದು, ಮೊ.ಸಂ:9148267229 ಮತ್ತು 9844214270ಗೆ ಕರೆ ಮಾಡಿ ಗ್ರಾಹಕರು ಮಾಹಿತಿಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments