ಶಿವಮೊಗ್ಗ, ಮಾ.20 : ಒಳಮೀಸಲಾತಿ ರೋಸ್ಟರ್ ಹಂಚಿಕೆ ಮತ್ತು ಹಳೇಯ ಮೀಸಲಾತಿ ವ್ಯವಸ್ಥೆಯಅನ್ವಯವೇ ನೇಮಕಾತಿ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮಾ.24 ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ.ನಾನ್ಯನಾಯ್ಕ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಹಾಗೂ ಬಂಜಾರ ಸಮಾಜದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆಎಂದರು.
ಒಳಮೀಸಲಾತಿ ಪರವಾದ ಯಾವುದೇ ಹೋರಾಟವನ್ನು ನಾವು ಟೀಕೆ ಮಾಡಲು ಸಿದ್ಧರಿಲ್ಲ, ಏಕೆಂದರೆಪರಿಶಿಷ್ಟ ಜಾತಿಯೊಳಗಿನ ೧೦೧ ಜಾತಿಯ ಜನರು ಕೂಡಾ ನಾವುಇದುವರೆಗೂ ಅಣ್ಣ ತಮ್ಮಂದಿರಂತೆಬದುಕಿದ್ದೇವೆ. ಆದರೆ ಒಳಮೀಸಲಾತಿ ಹಂಚಿಕೆಗೆ ನ್ಯಾ|| ನಾಗಮೋಹನ್ದಾಸ್ ಆಯೋಗ ಸಂಗ್ರಹಿಸಿರುವದತ್ರಾಂಶ ಒಂದು ಸಮಾಜಕ್ಕೆ ಪೂರ್ವಾಗ್ರಹ ಪೀಡಿತವಾಗಿದೆ ಎನ್ನುವುದು ನಮ್ಮ ಅಭಿಪ್ರಾಯ. ಇದನ್ನುಹಲವಾರು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಸಮುದಾಯದ ರಾಜಕೀಯದ ಒತ್ತಡಕ್ಕೆ ಮಣಿದು ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯಮಾಡಲಾಗಿದೆ. ಈಗ ಮತ್ತೆ ಅದೇ ಅನ್ಯಾಯ ಮುಂದುವರಿಯುವ ಆತಂಕ ಎದುರಾಗಿದೆ. ಒಂದುಹಂತದಲ್ಲಿ ಇದು ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಅಲೆಮಾರಿ ಸಮಾಜಕ್ಕೆ ಮರಣಶಾಸನವಾಗಿದೆ ಎನ್ನುವುದು ನಮ್ಮ ಆತಂಕ. ಒಳಮೀಸಲಾತಿ ಈಗ ಗೊಂದಲದ ಗೂಡಾಗಿದೆ. ಸರ್ಕಾರಿಹುದ್ದೆಗಳ ನೇಮಕಾತಿ ವಿಚಾರಕ್ಕೆ ಈಗ ಕೋರ್ಟ್ ಶೇ.೧೫ರ ಮೀಸಲಾತಿ ಪ್ರಕಾರ ನೇಮಕ ಮಾಡುವಂತೆಹೇಳಿದೆ. ಮತ್ತೊಂದೆಡೆ ಹಿಂದಿನ ಸರ್ಕಾರ ಮಾಡಿದ್ದ ಶೇ.17ರ ಮೀಸಲಾತಿ ಸಂವಿಧಾನದ 9 ನೇ ಶೆಡ್ಯೂಲ್ಗೆಸೇರಿಲ್ಲ ಎಂದರು.
ರಾಜ್ಯಸರ್ಕಾರದ ಒಳಮೀಸಲಾತಿ ಹಂಚಿಕೆಯ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ನುಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗ ಮುಂದುವರಿದಿದೆ ಎಂದು ನ್ಯಾ|| ನಾಗಮೋಹನ್ದಾಸ್ಆಯೋಗ ಹೇಳಿಲ್ಲ. ಸಂಗ್ರಹಿಸಿರುವ ದತ್ತಾಂಶಕ್ಕೂ ಸರ್ಕಾರಕ್ಕೆ ನೀಡಿರುವ ವರದಿಗೂ ವ್ಯತ್ಯಾಸವಿದೆ. ಇಷ್ಟುಗೊಂದಲಗಳ ನಡುವೆಯೂ ಒಂದು ಸಮುದಾಯ ಮೀಸಲಾತಿ ಜಾರಿಗೆ ಪಟ್ಟು ಹಿಡಿದಿದೆ. ಇದಕ್ಕೆರಾಜಕೀಯ ಒತ್ತಡ ಹೇರುತ್ತಿದ್ದು, ಜೊತೆಗೆ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಯಾರನ್ನು ಹೇಗೆ ಬಲಿಪಶುಮಾಡಲಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಈ ಬೃಹತ್ ಪ್ರತಿಭಟನೆಗೆ ಜಿಲ್ಲೆಯ ಎಲ್ಲಾ ಬಂಜಾರ, ಭೋವಿ, ಕೊರಚ, ಕೊರಮ ಇತ್ಯಾದಿ ೫೯ ಜಾತಿಸಮುದಾಯದ ತಾಂಡಾ, ಹಟ್ಟಿ, ಗ್ರಾಮದ ಪ್ರತಿಯೊಬ್ಬರೂ ಹಾಗೂ ಸಮಾಜಗಳ ಸಂಘಗಳಪದಾಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ, ಲಂಬಾಣಿ, ಕೊರಚ, ಕೊರಮದ ಮುಖಂಡರುಗಳಾದ ವೀರಭದ್ರಪ್ಪಪೂಜಾರಿ, ಧೀರರಾಜ್ ಹೊನ್ನವಿಲೆ, ಬಿ.ಜಗದೀಶ್, ಎಸ್.ರವಿಕುಮಾರ್, ಆರ್.ಜಗದೀಶ್, ಸುರೇಶ್, ಬನ್ನೂರು, ಬೋಜ್ಯಾನಾಯ್ಕ, ಆಯನೂರು ಶಿವಾನಾಯ್ಕ, ಪ್ರೇಮ್ಕುಮಾರ್, ಹೊಂಗಿರಣ ಲೋಕೇಶ್, ದೇವಿಕುಮಾರ್, ಟಿ.ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.
