Homeಜಿಲ್ಲೆಎಲ್.ಬಿ.ಕಾಲೇಜಿನಲ್ಲಿ ಕ್ಯಾಂಪಸ್ ಕಟ್ಟೆ : ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

ಎಲ್.ಬಿ.ಕಾಲೇಜಿನಲ್ಲಿ ಕ್ಯಾಂಪಸ್ ಕಟ್ಟೆ : ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

Spread the love

ಶಿವಮೊಗ್ಗ.ಮಾ.23: ಮಹಿಳಾ ದಿನಾಚರಣೆ ಅಂಗವಾಗಿ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಭದ್ರಾವತಿಆಕಾಶವಾಣಿ ಸಹಯೋಗದೊಂದಿಗೆ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾಧಕಿಯರು, ರಾಜ್ಯಾಡಳಿತ, ಸಾಹಿತ್ಯ, ಸಮಾಜ ಸುಧಾರಣೆ ಇನ್ನಿತರ ವಿಷಯಗಳಕುರಿತು ವಿದ್ಯಾರ್ಥಿನಿಯರು ಮಾತನಾಡಿದರು. ಪ್ರಮುಖವಾಗಿ ಬೆಳವಡಿ ಮಲ್ಲಮ್ಮ, ಕೆಳದಿ ರಾಣಿ ಚನ್ನಮ್ಮ, ರಾಣಿ ಚೆನ್ನಬೈರಾದೇವಿ, ಅಕ್ಕಮಹಾದೇವಿ, ಸಾಹಿತಿಗಳಾದ ಸಹನಾ ವಿಜಯಕುಮಾರ್, ಸಬಿತಾ ಬನ್ನಾಡಿ, ದೀಪಾ ಭಸ್ತಿ ಇನ್ನಿತರರ ಸಾಧಕರ ಮೇಲೆ ವಿದ್ಯಾರ್ಥಿನಿಯರು ಬೆಳಕು ಚೆಲ್ಲಿದರು.

ಪ್ರಥಮ ಬಿಎ ವಿದ್ಯಾರ್ಥಿನಿ ಸಂಜನಾ, ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿ ಚಂದನಾ, ಸ್ಮಿತಾ, ಸಾಧ್ವನಿ, ಬಿ.ಕಾಂವಿದ್ಯಾರ್ಥಿನಿ ದಿವ್ಯಶ್ರೀ ಇನ್ನಿತರರು ಪ್ರಶಸ್ತಿಗೆ ಭಾಜನರಾದರು.

ಆಕಾಶವಾಣಿಯ ಉದ್ವೋಷಕ ಡಾ. ಬಸವರಾಜ್, ಕಾಲೇಜಿನ ಪ್ರಾಚಾರ್ಯ ಡಾ. ಕ್ಷ್ಮಿಶ .ಎಸ್.ಡಾ.ನಿರಂಜನಮೂರ್ತಿ, ಮಂಜುನಾಥ್, ರವೀಂದ್ರ, ಡಾ. ಪ್ರಶಾಂತ್ ಮಾಂಡ್ರೆ, ವಿನಯ ಚಂದನ್, ದೇವರಾಜ್, ಜೆನಫರ್ ಡಿಸೋಜ ಮೊದಲಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments