Homeಜಿಲ್ಲೆಡಾ.ಸಮೀಕ್ಷಾ ಸಾವನ್ನು ತನಿಖೆಗೆ ಒಳಪಡಿಸಿ: ಕರ್ನಾಟಕ ಪಶುವೈದ್ಯಕೀಯ ಸಂಘ ಆಗ್ರಹ

ಡಾ.ಸಮೀಕ್ಷಾ ಸಾವನ್ನು ತನಿಖೆಗೆ ಒಳಪಡಿಸಿ: ಕರ್ನಾಟಕ ಪಶುವೈದ್ಯಕೀಯ ಸಂಘ ಆಗ್ರಹ

Spread the love

ಶಿವಮೊಗ್ಗ, ಮಾ.23: ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಸಾವಿರ ಪ್ರಕರಣವನ್ನು ತನಿಖೆ ಮಾಡಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ಪಶುವೈದ್ಯಕೀಯ ಸಂಘ ಆಗ್ರಹಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ.ಕೆಂಡೇಶ್ ಅವರು, ಒಬ್ಬಸೇವಾನಿರತ ಯುವ ಪಶುವೈದ್ಯೆಯ ಅಕಾಲಿಕ ಮರಣ ನಮಗೆಲ್ಲಾ ಅತೀವ ನೋವುಂಟು ಮಾಡಿದೆ. ಅಲ್ಲದೆಇಂತಹದೊಂದು ದುರ್ಘಟನೆ ನಡೆಯುವುದಕ್ಕೆ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ ಎಂದು ಸ್ಪಷ್ಟವಾಗಿಗೋಚರವಾಗುತ್ತದೆ. ವನ್ಯಜೀವಿ ವಿಭಾಗದ .ಡಿ.ಯವರು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿದೆ. ಇವರದ್ದು ತಪ್ಪಿದ್ದರೆ ಅಮಾನತ್ತು ಮಾಡಿ ನಂತರ ತನಿಖೆ ಮಾಡಬೇಕು. ಒಟ್ಟಾರೆ ಸಂಪೂರ್ಣ ಘಟನೆಯನ್ನುಮುಖ್ಯಮಂತ್ರಿಗಳು ವಿಶೇಷ ತನಿಖಾತಂಡ ರಚಿಸಿ, ಮೃತ ವೈದ್ಯೆಗೆ ನ್ಯಾಯ ಒದಗಿಸಬೇಕು ಹಾಗೂ ಮುಂದೆಇಂತಹ ಘಟನೆಗಳು ಎಂದೂ ಜರುಗಬಾರದು ಎಂದರು.

ಪಶುವೈದ್ಯೆಯ ಸಾವಿನ ಹಿಂದೆ ಅನೇಕ ಸಂಶಯಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿ ನಿಯಮಗಳನ್ನೇಉಲ್ಲಂಘಿಸಲಾಗಿದೆ. ತರಬೇತಿ ಅವಧಿಯಲಿದ್ದ ಮಹಿಳಾ ಪಶುವೈದ್ಯಯನ್ನು ರಾತ್ರಿ 11 ಗಂಟೆಗೆ ಯಾವುದೇಸುರಕ್ಷತಾ ವ್ಯವಸ್ಥೆಗಳಿಲ್ಲದೆ ವಾಹನ ಚಾಲಕನೊಂದಿಗೆ ನೀರಾನೆ ತಪಾಸಣೆಗೆ ಕಳುಹಿಸಿದ್ದು ಅಲ್ಲಿನಲೋಪವನ್ನೇ ಎದ್ದು ತೋರಿಸುತ್ತದೆ. ವನ್ಯಜೀವಿ ವಿಭಾಗದಲ್ಲಿ ಪ್ರಾಣಿಗಳ ಪಾಲನೆಪೋಷಣೆ, ಉಪಚಾರ, ಚಿಕಿತ್ಸೆ, ಸಾಗಾಣೆ ಮುಂತಾದ ವಿಷಯಗಳಿಗೆ ಕಟು ನಿಯಮಗಳಿದ್ದರೂ ಕೂಡ ವನ್ಯಜೀವಿ ವಿಭಾಗ ಅದನ್ನುಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಅಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರು ಈಗಾಗಲೇ ತಮ್ಮ ಕೆಲಸಕ್ಕೆರಾಜೀನಾಮೆ ನೀಡಿದ್ದರು. ಹಾಗಾಗಿ ಒಬ್ಬನೇ ಒಬ್ಬ ನುರಿತ ಖಾಯಂ ಪಶುವೈದ್ಯರಿಲ್ಲದೆ ಮೃಗಾಲಯವನ್ನುಕಾರ್ಯನಿರ್ವಾಹಕ ನಿರ್ದೇಶಕರು ಹೇಗೆ ನಡೆಸುತ್ತಿದ್ದಾರೆ ಎಂಬುದೇ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ, ಅಧಿಕಾರಿಯು ಸಮೀಕ್ಷಾ ರೆಡ್ಡಿ ನೀರಾನೆ ಚಿಕಿತ್ಸೆಗೆ ರಾತ್ರಿವೇಳೆ ಹೋಗಿದ್ದು ತಮಗೆ ಗೊತ್ತೇ ಇಲ್ಲಎಂಬ ಹೇಳಿಕೆ ನೀಡಿರುವುದು ಅಚ್ಚರಿ ತರುತ್ತದೆ. ಇದು ಹೇಗೆ ಸಾಧ್ಯ ? ಒಬ್ಬ ಅಧಿಕಾರಿಯ ಅನುಮತಿಇಲ್ಲದೆ ಚಾಲಕನೊಬ್ಬ ವೈದ್ಯರನ್ನು ಅದು ರಾತ್ರಿವೇಳೆ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಪಶುವೈದ್ಯಯನ್ನು ಕರೆದುಕೊಂಡು ಹೋಗಿದ್ದಾದರೂ ಏಕೆ ? ವೈದ್ಯೆ ನೀರಾನೆಗೆ ಚಿಕಿತ್ಸೆ ನೀಡಿದ ಬಗ್ಗೆಯಾಗಲಿ, ಬೇರೆ ವಿಷಯವಾಗಲಿ ಸಿಸಿ ಟಿವಿಯಲ್ಲಿ ಸೆರೆಯಾಗಬೇಕಿತ್ತು ಆದರೆ ಈಗ ಸಿಸಿ ಟಿವಿಯಪುಟೇಜ್‌ಗಳೇ ಇಲ್ಲ ಎಂದು ಹೇಳುತ್ತಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಡಾ. ವಿನಯ್ ಮಾತನಾಡಿ, ಒಟ್ಟಾರೆ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುವ ಪಶುವೈದ್ಯರಿಗೆ ಅನೇಕಸವಾಲುಗಳಿವೆ. ಸೂಕ್ತ ರಕ್ಷಣೆಯಂತೂ ಇಲ್ಲವೇ ಇಲ್ಲ. ಜೀತದಾಳುಗಳಂತೆ ದುಡಿಯಬೇಕಾಗಿದೆ. ಸದಾಭಯದ ವಾತಾವರಣವಿದೆ. ಒತ್ತಡದ ಸನ್ನಿವೇಶಗಳಿವೆ. ಕೇವಲ 650 ರೂ.ಗಳ ದಿನಗೂಲಿ ಆಧಾರದಲ್ಲಿತರಬೇತಿಗಾಗಿ ಪಶುವೈದ್ಯರನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ರಕ್ಷಣೆ ನೀಡದಿದ್ದರೆ ಪ್ರಾಣಹಾನಿಯಾದರೆಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಹಾಗಾಗಿ ಇಡೀ ಘಟನೆಯನ್ನು ಸಂಪೂರ್ಣವಾಗಿತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಬೇಕು ಮೃತ ಕುಟುಂಬಕ್ಕೆ ನ್ಯಾಯಒದಗಿಸಬೇಕೆಂದು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ|| ರಾಜಶೇಖರ್ ಡಿ.ಬಿ., ಖಜಾಂಚಿ ಪ್ರಸನ್ನಕೆ.ಎಂ., ಕಾರ್ಯದರ್ಶಿ ಡಾ|| ಕಿರಣ್ ಎಂ., ಡಾ||ರಮೇಶ್, ಡಾ||ಸುರೇಶ್‌ಪಟೇಲ್, ಡಾ||ರೇಖಾ ಸೇರಿದಂತೆಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments