ಶಿವಮೊಗ್ಗ, ಮಾ.23 : ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರುಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಮಾಲತೇಶ್ ಮಾತನಾಡಿ ಸರ್ಕಾರಕ್ಕೆ ಮನವಿಮಾಡಿದರು.
ಪ್ರತಿನಿತ್ಯ ಬೆಳಗಿನ ಜಾವ ಎಲ್ಲರೂ ಎದ್ದೇಳುವ ಮುಂಚೆ ನಾವು ಸಮಾಜಕ್ಕೆ, ಸರ್ಕಾರಕ್ಕೆ, ರಾಜಕೀಯಗಣ್ಯರುಗಳಿಗೆ ರಾಜ್ಯ, ದೇಶ, ವಿದೇಶದ ಸುದ್ದಿಗಳನ್ನು ಹೊತ್ತು ತಂದು ಮನೆ ಮನೆ ಬಾಗಿಲಿಗೆ ತಲುಪಿಸುವಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ನಮ್ಮ ಜೀವನ ಶೋಚನೀಯವಾಗಿದ್ದು, ಈಗ ನಮ್ಮರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಶಂಭುಲಿಂಗ ಅವರು ಜಿ. ಬಿ ಸಿಂಡ್ರೋಮ್ ಎಂಬಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ಕೂಡಲೆ ಸರ್ಕಾರ ಗಮನ ಹರಿಸಿ ಪರಿಹಾರ ನೀಡಬೇಕುಎಂದರು.
ಪತ್ರಿಕ ವಿತರಕ ಸಂಘದ ಗೌರವಾಧ್ಯಕ್ಷ ಹುಲಿಗಿ ಕೃಷ್ಣ ಮಾತನಾಡಿ, ಕನಿಷ್ಠ ಕಾರ್ಮಿಕ ಇಲಾಖೆ ಸೌಲಭ್ಯನೂಸಹ ನಮಗೆ ದೊರೆಯದೆ ಅನ್ಯಾಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಲ್ಲಾ ಪತ್ರಿಕವಿತರಿಕರಿಗೂ ಆರೋಗ್ಯ ವಿಮೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ನೆರವಿನ ರೀತಿಯಲ್ಲಿ ಹೊಸ ಚಿಂತನೆಮಾಡಿ. ಇದರಿಂದ ಪತ್ರಿಕ ವಿತರಕರ ಜೀವನ ಸುಧಾರಿಸುವಂತಾಗಲಿ ಎಂದರು.
ಜಯ ಕರ್ನಾಟಕ ಜನಪರ ವೇದಿಕೆ ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರೀ ಮಾತನಾಡಿ, ಪತ್ರಿಕಾ ವಿತರಕರ ಜೀವನ ಬಹಳಷ್ಟು ಕಷ್ಟದಲ್ಲಿದ್ದು ಸರ್ಕಾರ ವಿಶೇಷವಾದ ಅನುದಾನ ಮತ್ತುಸೌಲಭ್ಯಗಳನ್ನು ನೀಡುವ ಮುಖಾಂತರ ಇಡೀ ದೇಶಕ್ಕೆ ಮಾದರಿಯಾಗಬೇಕು. ಸಮಾಜದಹಾಗು–ಹೋಗುಗಳ ವಿಷಯ ಮತ್ತು ಸುದ್ದಿಯನ್ನು ತಲುಪಿಸುವ ವಿತರಕರ ಬದುಕು ಕಟ್ಟಿಕೊಳ್ಳಲು ಹೊಸಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್, ಪದಾಧಿಕಾರಿಗಳಾದ ಪರಶುರಾಮ್ ರಾವ್, ಮಲ್ಲಿಕಾರ್ಜುನ್ಭದ್ರಾವತಿ , ಪಾರ್ಥಿಬನ್, ರಾಮು ಜಿ, ಚಂದ್ರಶೇಖರ್, ಪ್ರತಾಪ್, ಶರತ್, ಧನಂಜಯ್, ಅಜೀ ಉಲ್ಲಾ, ಪ್ರಾಣೇಶ್, ಸಂಗಮೇಶ್ವರ್, ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಕಾರ್ಯದರ್ಶಿ ಇಮ್ರಾನ್, ಕರವೇ ಜನಮನ ರಾಜ್ಯ ಸಂಘಟನೆ ಪದಾಧಿಕಾರಿಗಳು ಇದ್ದರು.
