ಶಿವಮೊಗ್ಗ, ಮಾ.23 : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸಹ್ಯಾದ್ರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಂಡು ಅವರನ್ನು ಕೆಲಸದಿಂದವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಎನ್‌ಎಸ್‌ಯುಐ ಇಂದು ಕಾಲೇಜಿನ ಮುಂಭಾಗದಲ್ಲಿಪತ್ರಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿದ್ದ ಉಪನ್ಯಾಸಕನಾಗಿ ತನ್ನ ಲೈಂಗಿಕ ಬಯಕೆಗಳನ್ನುತೀರಿಸಿಕೊಳ್ಳಲು ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಆಂತರಿಕ ಪರೀಕ್ಷೆಗೆಅಂಕ ಕೊಡಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕೆಂದು ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ನೊಂದ ವಿದ್ಯಾರ್ಥಿನಿಯರು ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೆ ನೆಪ ಮಾತ್ರಕ್ಕೆ ತಿಳುವಳಿಕೆ ಪತ್ರವನ್ನು ನೀಡಿ ಪ್ರಕರಣವನ್ನು ಮುಚ್ಚಿಹಾಕಲುಯತ್ನಿಸುತ್ತಿರುವುದನ್ನು ಎನ್.ಎಸ್.ಯು.ಐ. ಸಹಿಸುವುದಿಲ್ಲ.
ಅನೇಕ ಮಹನೀಯರುಗಳು ಕಲಿತು, ಕಲಿಸಿದ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹಅಹಿತಕರ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ನೊಂದ ವಿದ್ಯಾರ್ಥಿನಿಯರು ದೂರು ಕೊಟ್ಟರೂಪ್ರಾಂಶುಪಾಲರು ಕ್ರಮಕೈಗೊಂಡಿಲ್ಲ. ನಂತರ ಎನ್.ಎಸ್.ಯು.ಐ. ಕುಲಸಚಿವರನ್ನು ಸಂಪರ್ಕಿಸಿಘಟನೆಯ ವಿವರಗಳನ್ನು ನೀಡಿತ್ತು. ಕುಲಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಉಪನ್ಯಾಸಕನ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆಕಾರಣವಾಗಿದೆ. ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ. ಕೂಡಲೇ ಕುಲಪತಿಗಳು ಈಕಾಮುಕ ಉಪನ್ಯಾಸಕನನ್ನು ಕೆಲಸದಿಂದ ವಜಾಗೊಳಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ವಿವಿ ಬಂದ್ ಮಾಡುವಂತ ತೀವ್ರ ಪ್ರತಿಭಟನೆ ನಡೆಸಲಾಗುವುದುಎಂದು ಈ ಮೂಲಕ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ವಿಜಯಕುಮಾರ್, ರಾಜ್ಯ ಕಾರ್ಯದರ್ಶಿ ಬಾಲಾಜಿಹೆಚ್.ಎಸ್., ನಗರಾಧ್ಯಕ್ಷ ರವಿಕುಮಾರ್, ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ಅಭಿಷೇಕ್ಅನುಪಿನಕಟ್ಟೆ, ಪ್ರಜ್ವಲ್, ಶ್ರೀಕಾಂತ್, ಕಿಸನ್, ಯೂಸಫ್, ಸಾದುಲ್ಲ, ಅಭಿಷೇಕ್, ಪ್ರಭು, ಶ್ರೇಯಸ್, ಕುಮಾರ್ ಇನ್ನೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
