Homeಅಪರಾಧ11 ಪ್ರಕರಣಗಳು - ಪೊಲೀಸರಿಂದ ನಗದು ಮೌಲ್ಯ ವಶ

11 ಪ್ರಕರಣಗಳು – ಪೊಲೀಸರಿಂದ ನಗದು ಮೌಲ್ಯ ವಶ

Spread the love

ಭದ್ರಾವತಿ, ಮಾ.24: 5 ಜಾನುವಾರು ಕಳ್ಳತನ, 4 ದ್ವಿ ಚಕ್ರ ವಾಹನ ಕಳ್ಳತನ , 1 ಕೊಲೆಗೆ ಯತ್ನ ಪ್ರಕರಣಗಳು ಸೇರಿದಂತೆ  ಒಟ್ಟು 11 ಪ್ರಕರಣಗಳನ್ನು ಪತ್ತೆ ಹಚ್ಚಿ ನಗರದ ಪೊಲೀಸರು ರೂ 20,500/- ನಗದು ಹಾಗೂಅಂದಾಜು ಮೌಲ್ಯ 95,500/- ರೂಗಳ 4 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿ ನ್ಯೂಟೌನ್ ಪೊಲೀಸರ ಕಾರ್ಯಾಚರಣೆಯಲ್ಲಿ ಜಾನುವಾರು & ದ್ವಿಚಕ್ರ ವಾಹನ ಕಳ್ಳತನಪ್ರಕರಣಗಳ ಆರೋಪಿಯ ಬಂಧನ ಮಾಲಾಗಿದ್ದು, 11 ಪ್ರಕರಣಗಳ ಪತ್ತೆ ಹಾಗೂ 4 ಬೈಕ್ ಗಳು & 20,500/- ನಗದು ಸೇರಿ ಒಟ್ಟು 1,16,000/- ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

ದಿನಾಂಕ:24-09-2025 ರಂದು ರಾತ್ರಿ  ಭದ್ರಾವತಿ ಹೊಸಸಿದ್ದಾಪುರ ಗ್ರಾಮದಲ್ಲಿ ಯಾರೋ ಕಳ್ಳರುಕೊಟ್ಟಿಗೆಯಲ್ಲಿದ್ದ 02 ಹಸುಗಳನ್ನು ಮತ್ತು 01 ಕರುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಬಗ್ಗೆಪಿರ್ಯಾದಿದಾರರಾದ  ಹೊಸಸಿದ್ದಾಪುರ ಭದ್ರಾವತಿ  ರಂಜಿತ್ ತಂದೆ ಶ್ರೀನಿವಾಸ(35  ) ರವರು ನೀಡಿದದೂರಿನ ಮೇರೆಗೆ  ಠಾಣಾ ಗುನ್ನೆ ಸಂಖ್ಯೆ:231/2025 ಕಲಂ 305(A), 331(4) ಬಿ.ಎನ್.ಎಸ್ ರೀತ್ಯಾಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

  ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿತನ ಪತ್ತೆಗಾಗಿ ಪೊಲೀಸ್ ಅಧೀಕ್ಷಕರು  ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧಿಕ್ಷರಾದ .ಜಿ.ಕಾರಿಯಪ್ಪ, ರಮೇಶ್ ಕುಮಾರ್ ಎಸ್, ರವರ ಮಾರ್ಗದರ್ಶನದಲ್ಲಿ ಹಾಗೂ ಭದ್ರಾವತಿಯ ಉಪವಿಭಾಗದ ಉಪಾಧೀಕ್ಷಕರು ಪ್ರಕಾಶ್ ರಾಥೋಡ್‌ ಮತ್ತು ಕೆ.ನಾಗಮ್ಮ. ರವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ರಮೇಶ್.ಟಿ ಪೆಕ್ಟರ್ ನ್ಯೂಟೌನ್ ರವರ ನೇತೃತ್ವದಲ್ಲಿ ಪಿ.ಎಸ್. ಕವಿತಾ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ374 ನವೀನ್.ಟಿ, ಹೆಚ್.ಸಿ 408 ಆದರ್ಶ.ಆರ್, ಸಿ.ಪಿ.ಸಿ 1514 ಪ್ರಕಾಶ.ಜಿ.ಕೆ, ಸಿ.ಪಿ.ಸಿ 1675 ಪ್ರಸನ್ನ.ಹೆಚ್ ರವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ.

ತನಿಖಾ ತಂಡವು ಪ್ರಕರಣದ ಆರೋಪಿತನಾದ 1) ಭದ್ರಾವತಿ  ಅಪ್ಪರ್ ಹುತ್ತಾ ಆಸ್ಪತ್ರೆಯ ಬಳಿಪುತ್ತೂರು ಆಯುರ್ವೇದಿಕ್ ನಿವಾಸಿಯ  ದಿಲೀಪ.ಎಸ್ @ ಕರಿಯ, (20) ಈತನನ್ನು ಪತ್ತೆ ಮಾಡಿಆರೋಪಿತನಿಂದ  5 ಜಾನುವಾರು ಕಳ್ಳತನ ಪ್ರಕರಣ, 4 ದ್ವಿ ಚಕ್ರ ವಾಹನಕಳ್ಳತನ ಪ್ರಕರಣ, 1 ಕೊಲೆಗೆ ಯತ್ನ ಪ್ರಕರಣ, 1 ಹಲ್ಲೆ ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳನ್ನು ಪತ್ತೆಹಚ್ಚಿದ್ದು,ಈ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು ರೂ 20,500/- ನಗದು ಹಾಗೂ ಅಂದಾಜು ಮೌಲ್ಯ95,500/- ರೂಗಳ 4 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

 ತನಿಖಾ ತಂಡದ ಉತ್ತಮವಾದ ಕಾರ್ಯವನ್ನು  ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರುಪ್ರಶಂಸಿಸಿ ಅಭಿನಂದಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments